June 22, 2021

HAVERI | ಸಂಗೂರ ಗ್ರಾಮದಿಂದ ಕಾಣೆಯಾಗಿರುವ ವ್ಯಕ್ತಿಯ ಪತ್ತೆಗೆ ಮನವಿ

ಹಾವೇರಿ: ಹಾವೇರಿ ತಾಲೂಕಿನ ಸಂಗೂರ ಗ್ರಾಮದ 44 ವರ್ಷದ ಬಸವರಾಜ ಚನ್ನಬಸಪ್ಪ ಹೆಗ್ಗಣ್ಣನವರ @ಪುಟ್ಟಣ್ಣನವರ ಎಂಬಾತ ಡಿಸೆಂಬರ್-2019 ರಂದು ಮನೆಯಿಂದ ಕೆಲಸಕ್ಕೆ ಹೋದವನು ಮರಳಿ ಬಾರದೆ ಕಾಣೆಯಾಗಿರುವುದಾಗಿ ಹಾವೇರಿ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕಾಣೆಯಾದ ವ್ಯಕ್ತಿ ಆರಫೂಟ್ ಎತ್ತರ, ತೆಳುವಾದ ಮೈಕಟ್ಟು, ಸಾದಗಪ್ಪು ಮೈಬಣ್ಣ, ಕೋಲುಮುಖ, ನೀಟಾದ ದಪ್ಪಮೂಗು, ಸಣ್ಣ ಹಣೆ, ಬಲಗೈ ಮೇಲೆ ಆಂಜನೇಯನ ಚಿತ್ರ ಇದ್ದು ಕನ್ನಡ ಮಾತನಾಡುತ್ತಾನೆ. ಈ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ದೊರೆತಲ್ಲಿ ಹತ್ತಿರ ಪೊಲೀಸ್ ಠಾಣೆ ಅಥವಾ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಲು ಹಾವೇರಿ ಗ್ರಾಮಂತರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this News
error: Content is protected !!