June 18, 2021

NEWS PAPER PERSON| ತನ್ನ ತಾಯಿ ನಿಧನವಾದರೂ ಮನೆ ಮನೆಗೆ ನ್ಯೂಸ್ ಪೇಪರ್ ಹಾಕಿ ಕರ್ತವ್ಯ ಪ್ರಜ್ಞೆ ಮೆರೆದ ಪತ್ರಿಕಾ ವಿತರಕ.!

ಹಾವೇರಿ – ಅಯ್ಯೋ ಇವತ್ತು ಮನೆಗೆ ಪೇಪರ್ ಯಾಕೆ ಬಂದಿಲ್ಲ.‌ ಅಯ್ಯೋ ಇವತ್ತು ಇಷ್ಟು ಯಾಕೆ ಲೇಟು.? ಸ್ವಲ್ಪ ಬೇಗ ಪೇಪರ್ ಹಾಕಿ. ಹೀಗೆ ಹತ್ತು ಹಲವು ಜನರು ಬೆಳಗ್ಗೆ ಪತ್ರಿಕಾ ವಿತರಣೆ ಮಾಡುವ ಬಾಲಕರಿಗೆ ಹಾಗೂ ವಿತರಕರಿಗೆ ಹೇಳಿ‌ ಸಿಟ್ಟು ಮಾಡುತ್ತಿರುತ್ತಾರೆ. ಆದರೆ ಅವರ ನೋವಿನ ಕಥೆಗಳು ಮಾತ್ರ ಯಾರಿಗೂ ಗೊತ್ತಿರುವುದಿಲ್ಲ.

ಹಾವೇರಿಯಲ್ಲಿ ರಾಜ್ಯ ಮತ್ತು ಸ್ಥಳೀಯ ದಿನಪತ್ರಿಕೆಗಳನ್ನು ಮನೆ ಮನೆಗೆ ಹೋಗಿ ಹಾಕುವ ಯುವಕನೊಬ್ಬ ಮನೆಯಲ್ಲಿ ತಾಯಿ‌ ನಿಧನವಾದರೂ ಸಹ, ಆ ನೋವಿನಲ್ಲೂ ಮನೆ ಮನೆಗೆ ಪತ್ರಿಕೆ ಹಾಕಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾನೆ. ಸಂಜಯ ಮಲ್ಲಪ್ಪ ಏಳುಕೋಳದ ಸುಮಾರು ವರ್ಷಗಳಿಂದ ಪತ್ರಿಕೆಗಳನ್ನು ಮನೆಗೆ ಹಾಕುವ ಕೆಲಸ ಮಾಡುತ್ತಿದ್ದಾನೆ. ಆದರೆ ಇವತ್ತು ಬೆಳಂಬೆಳಗ್ಗೆ 4 ಗಂಟೆ ಸುಮಾರಿಗೆ 78 ವರ್ಷದ ತಾಯಿ ಶಾಂತವ್ವ ಏಳುಕೋಳದ ನಿಧನರಾಗಿದ್ದಾರೆ.

ಸಂಜಯ ತಾಯಿ ನಿಧನರಾದರೂ, ನೋವಿನಲ್ಲಿಯೇ ಪತ್ರಿಕೆಯ ಓದುಗರಿಗೆ ತೊಂದರೆ ಆಗಬಾರದು ಎಂದು ಬೆಳಗ್ಗಿನಿಂದಲೇ ಬಸವೇಶ್ವರ ನಗರ, ವಿದ್ಯಾನಗರ ಸೇರಿದಂತೆ ಹಾವೇರಿ ನಗರದಲ್ಲಿ ವಿಜಯಕರ್ನಾಟಕ, ಮೂಡಣ, ಲೋಕದರ್ಶನ, ಕನ್ನಡಮ್ಮ ಹೀಗೆ ಹಲವು ಪ್ರಾದೇಶಿಕ ಮತ್ತು ರಾಜ್ಯ ಪತ್ರಿಕೆಗಳನ್ನು ಹಾಕಿ ತನ್ನ ಕರ್ತವ್ಯ ನಿಷ್ಠೆ ಮೆರದಿದ್ದಾನೆ. ಪತ್ರಿಕೆಯ ಸಂಪಾದಕರು ತಾಯಿ ನಿಧನ ಹೊಂದಿದ್ದಾರೆ ಇವತ್ತು ಪತ್ರಿಕೆ ಹಾಕುವುದು ಬೇಡ ಮನೆಗೆ ಹೋಗು ತಾಯಿ‌‌ಯ ಅಂತೀಮ ಕಾರ್ಯಕ್ಕೆ ಸಿದ್ದತೆ ಮಾಡಿಕೊ ಅಂತಾ ತಿಳಿಸಿದರು ಕೂಡ, ಪತ್ರಿಕೆಯ ವಿತರಕ ಸಂಜಯ ನನ್ನಿಂದ ಪತ್ರಿಕೆಯ ಓದುಗರಿಗೆ ತೊಂದರೆ ಆಗಬಾರದು. ಎರಡು ಗಂಟೆಗಳ ಕಾಲ ಪತ್ರಿಕೆ ಹಾಕಿ ಮನೆಗೆ ಹೋಗುತ್ತೇನೆ ಅಂತಾ ಹೇಳಿ ಪತ್ರಿಕೆ ಹಾಕಿ ಮನೆಗೆ ಹೋಗಿದ್ದಾನೆ.

ತನ್ನ ತಾಯಿ ನಿಧನವಾದ್ರೂ, ಪತ್ರಿಕೆಯ ಓದುಗರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ತಾಯಿ ಅಗಲಿಕೆಯ ನಡುವೆ ತನ್ನ ಕರ್ತವ್ಯ ಪ್ರಜ್ಞೆ ಮೆರೆದಿರುವ ಸಂಜೀವ್ ಗೆ ನಮ್ಮದೊಂದು ಸಲಾಂ.

ಅವರ ತಾಯಿ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಸುದ್ದಿತರಂಗ ದ ಓದುಗರ ಪರವಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ.

Share this News
error: Content is protected !!