June 18, 2021

777 Charlie| ಡಿಫರೆಂಟ್ ಲುಕ್ ನಲ್ಲಿ “ಪಪ್ಪಿಯೊಂದಿಗೆ ಬಂದ ಕಿರಿಕ್ ಪಾರ್ಟಿ” ರಕ್ಷಿತ್ ಶೆಟ್ಟಿ.!

ಬೆಂಗಳೂರು: ಸಿಂಪಲ್ ಸ್ಟಾರ್ ಆಗಿದ್ದರೂ ಕೂಡ ಸಿನಿಮಾ ಆಯ್ಕೆಗಳ ವಿಚಾರದಲ್ಲಿ ತಾವು ಯಾವಾಗಲೂ ಸ್ಪೆಷಲ್ ಎಂಬುದನ್ನು ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ‌ ಸಾಬೀತು ಮಾಡುತ್ತಲೇ ಬಂದಿದ್ದಾರೆ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ, ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದ ಹುಟ್ಟುಹಬ್ಬದ ಶುಭಾಶಯಗಳು ಬರುತ್ತಿವೆ.

ಇದರ ಜೊತೆಗೆ ಹುಟ್ಟುಹಬ್ಬದ ವಿಶೇಷವಾಗಿ ಇಂದು ಅವರ ಅಭಿಮಾನಿಗಳಿಗಾಗಿ 777 ಚಾರ್ಲಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

ಸದ್ಯ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ, ಮನುಷ್ಯ ಮತ್ತು ಶ್ವಾನದ ನಡುವೆ ಇರುವ ಒಂದು ಎಮೋಷನಲ್ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಇಂದು ಈ ಸಿನಿಮಾದ ಮೊದಲ ಟೀಸರ್ ರೀಲಿಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

ಶುರುವಾಯ್ತು ಮತ್ತೊಂದು ಹಾದಿ- ಶ್ವಾನದೊಂದಿಗೆ ಬಂದ ಸಿಂಪಲ್ ಸ್ಟಾರ್.

ಅಭಿಮಾನಿಗಳು ಏನನ್ನು ಊಹಿಸುತ್ತಾರೋ ಅದಕ್ಕಿಂತಲೂ ಬೇರೆಯೆ, ಭಿನ್ನವಾಗಿಯೇ ರಕ್ಷಿತ್ ಶೆಟ್ಟಿ ಅವರು ಪರದೆ ಮೇಲೆ ಯಾವಾಗಲೂ ಕಾಣಿಸಿಕೊಳ್ಳುತ್ತಾರೆ. ಇವರು ನಟಿಸಿರುವ ಈ ಹಿಂದಿನ ಹಲವು ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ಬೇರೆಯದ್ದೇ ರೀತಿಯಲ್ಲಿ ಕಮಾಲ್ ಮಾಡಲಿದ್ದಾರೆ ಎನ್ನುವುದನ್ನು ಟೀಸರ್ ನೋಡಿದವರಿಗೆ ಅನ್ನಿಸುತ್ತದೆ. ಸಿನಿಮಾದಲ್ಲಿ ಶ್ವಾನ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವುದರಿಂದ ಟೀಸರಲ್ಲಿ ಪೂರ್ತಿಯಾಗಿ ಮುದ್ದಾದ ಶ್ವಾನವೇ ಕಾಣಿಸಿಕೊಂಡಿದೆ.

ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ

ಶ್ವಾನವು ಮಾಡುವ ತಂಟೆ, ತರ್ಲೆ, ತುಂಟಾ, ಕಷ್ಟ, ನೋವು, ಮುಗ್ಧತೆ ಅದರ ಜೀವನ ಶೈಲಿ ಹೇಳಿರುತ್ತದೆ ಎಂಬುದನ್ನು ನಾವು ಟೀಸರಲ್ಲಿ ನೋಡಬಹುದಾಗಿದೆ. ಟೀಸರ್ ಕೊನೆಯಲ್ಲಿ ರಕ್ಷಿತ್ ಶೆಟ್ಟಿಯವರು ಕಾಣಿಸಿಕೊಳ್ಳುತ್ತಾರೆ ಅವರ ಕೈಯಲ್ಲಿ ನಾವು ಶ್ವಾನ ಇರುವುದನ್ನು ಗಮನಿಸ ಬಹುದಾಗಿದೆ. ಟೀಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಟೀಸರ್ ನೋಡಿರುವವರಿಗೆ ಒಂದು ಕ್ಯೂರಿಯಾಸಿಟಿ ಹುಟ್ಟಿರುವುದಂತು ಖಂಡಿತಾ ನಿಜಾ. ಯಾಕೆ ಎಂದರೆ ಶ್ವಾನವನ್ನು ಇಟ್ಟುಕೊಂಡು ನಟ ರಕ್ಷಿತ್ ಶೆಟ್ಟಿವರು ಏನು ಹೇಳಲು ಹೊರಟ್ಟಿದ್ದಾರೆ ಎನ್ನುವುನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ 777 ಚಾರ್ಲಿ ಟೀಸರ್ ರಿಲೀಸ್ ಮಾಡಿದ್ದಾರೆ. ತಮಿಳಿನಲ್ಲಿ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಮಲೆಯಾಳಂನಲ್ಲಿ ಪೃಥ್ವಿರಾಜ್ ಟೀಸರ್ ರಿಲೀಸ್ ಮಾಡಿದ್ದಾರೆ. ಹಿಂದಿ ಮತ್ತು ಕನ್ನಡ ಟೀಸರಳು ಪರಮ್‌ ಸ್ಟುಡಿಯೋ ಮೂಲಕ ರಿಲೀಸ್ ಆಗಿದೆ.

777 ಚಾರ್ಲಿ ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಟ್ ಮೊದಲಾದವರು ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಟೀಸರ್ ನೋಡಿದ ಹಲವು ಸ್ಟಾರಳು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸುಂದರವಾಗಿದೆ ಹೃದಯಸ್ಪರ್ಶಿ ಪ್ರಯತ್ನ ಎಂದು ಪ್ರಕಾಶ್ ರಾಜ್ ಟ್ವಿಟ್ ಮಾಡಿದ್ದಾರೆ.

Share this News
error: Content is protected !!