June 13, 2021

MODI SPEACH| ದೇಶವನ್ನುದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ: ಜೂನ್21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್.!

ನವದೆಹಲಿ: ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಘೋಷಿಸಿದರು. ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಿಂದ ಇದು ಜಾರಿಯಾಗಲಿದೆ ಎಂದರು.

ಇನ್ನು ಮುಂದೆ ವ್ಯಾಕ್ಸಿನೇಷನ್‌ನ್ನು ಸೆಂಟ್ರಲೈಸ್ ಮಾಡಲಾಗುತ್ತಿದೆ. ರಾಜ್ಯಗಳಿಗೆ ವ್ಯಾಕ್ಸಿನ್ ಖರೀದಿಸಲು ನೀಡಿದ್ದ ಅವಕಾಶವನ್ನ ವಾಪಸ್ ತೆಗೆದುಕೊಳ್ಳುತ್ತೇವೆ. ಹಾಗೂ ಕೇಂದ್ರ ಸರ್ಕಾರವೇ ಇನ್ನುಮುಂದೆ ವ್ಯಾಕ್ಸಿನ್‌ನ್ನು ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ ಎಂದರು.

ಖಾಸಗಿ ಆಸ್ಪತ್ರೆಗಳಿಗೆ ಶೇ.25 ರಷ್ಟು ವ್ಯಾಕ್ಸಿನ್ ಖರೀದಿಸಲು ಅವಕಾಶ ನೀಡಲಾಗಿದೆ. ಆದ್ರೆ ಖಾಸಗಿ ಆಸ್ಪತ್ರೆಗಳು 150 ಕ್ಕಿಂತ ಹೆಚ್ಚು ಸೇವಾಶುಲ್ಕ ಸ್ವೀಕರಿಸುವಂತಿಲ್ಲ. ಖಾಸಗಿ ಆಸ್ಪತ್ರೆಗಳು ನೇರವಾಗಿ ವ್ಯಾಕ್ಸಿನ್ ತಯಾರಿಸುವವರಿಂದ ಖರೀದಿ ಮಾಡಬಹುದು ಎಂದು ಮೋದಿ ಇದೇ ವೇಳೆ ಹೇಳಿದ್ದಾರೆ.

ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ

ಮೋದಿ ಭಾಷಣದ ಮುಖ್ಯಾಂಶಗಳು..

ಕೊರೊನಾದ ಎರಡನೇ ಅಲೆಯೊಂದಿಗೆ ನಮ್ಮ ಹೋರಾಟ ಮುಂದುವರೆಯುತ್ತಿದೆ. ಈ ಹೋರಾಟದಲ್ಲಿ ನಾವು ನಮ್ಮ ಸಂಬಂಧಿಕರು, ಪರಿಚಿತರನ್ನು ಕಳೆದುಕೊಂಡಿದ್ದೇವೆ.

ಕಳೆದ ಹಲವು ವರ್ಷಗಳಲ್ಲಿ ಈ ರೀತಿಯ ಮಹಾಮಾರಿಯನ್ನು ನೋಡಿರಲಿಲ್ಲ.

ಕೊರೊನಾ ಆಸ್ಪತ್ರೆ, ಐಸಿಯು, ವೆಂಟಿಲೇಟರ್, ಟೆಸ್ಟಿಂಗ್ ನೆಟ್ವರ್ಕ್ ಸೇರಿದಂತೆ ಹೊಸ ಆರೋಗ್ಯದ ಮೂಲಸೌಕರ್ಯ ಮತ್ತಷ್ಟು ಬಲಗೊಂಡಿದೆ.

ಭಾರತದಲ್ಲಿ ಮೆಡಿಕಲ್ ಆಕ್ಸಿಜನ್‌ನ ಬೇಡಿಕೆ ಇದ್ದಕ್ಕಿದ್ದಂತೆ ಏರಿಕೆಯಾಯ್ತು. ಹಿಂದೆಂದೂ ಇಂಥ ಬೇಡಿಕೆ ಸೃಷ್ಟಿಯಾಗಿರಲಿಲ್ಲ.

ಆಕ್ಸಿಜನ್ ಪೂರೈಸಲು ಆಕ್ಸಿಜನ್ ರೈಲು, ವಿಮಾನ, ಹಡಗು ಸೇರಿದಂತೆ ಎಲ್ಲ ಸಾರಿಗೆಯನ್ನ ಬಳಸಲಾಯ್ತು.

ಮಿಷನ್ ಇಂದ್ರಧನುಷ್ ಲಾಂಚ್ ಮಾಡಲಾಯ್ತು. ಮೂಲಕ ದೇಶದಲ್ಲಿ ಯಾರ್ಯಾರಿಗೆ ವ್ಯಾಕ್ಸಿನ್ ನೀಡಬೇಕಿತ್ತು ಎಲ್ಲರಿಗೂ ವ್ಯಾಕ್ಸಿನ್ ನೀಡಲು ಪ್ರಾರಂಭಿಸಿದ್ವಿ.

ಜಗತ್ತಿನ ಮುಂದೆ ಮತ್ತೆ ಕೊರೊನಾ ವೈರಸ್ ಬಂತು ಈಗ ಭಾರತವನ್ನ ಕಾಪಾಡೋದು ಹೇಗೆ ಅನ್ನೋ ಚಿಂತೆ ಇತ್ತು.

ದೇಶದಲ್ಲಿ ನಮಗೆ ಕಡಿಮೆ ಸಮಯದಲ್ಲಿ ವ್ಯಾಕ್ಸಿನ್ ತಯಾರಿಸುವ ವಿಶ್ವಾಸವಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಕೆಲವು ಸಾವಿರ ಕೇಸ್ ಇದ್ದಾಗಲೇ ವ್ಯಾಕ್ಸಿನ್ ಟಾಸ್ಕ್ ರಚಿಸಲಾಯ್ತು.

ಈಗ ನೇಸಲ್ ವ್ಯಾಕ್ಸಿನ್ ಕೂಡ ತಯಾರಾಗುತ್ತಿದೆ. ಅದು ಬಂದಲ್ಲಿ ಮತ್ತಷ್ಟು ವೇಗ ಹೆಚ್ಚಲಿದೆ. ವ್ಯಾಕ್ಸಿನ್ ತಯಾರಾದ ಮೇಲೂ ಕೆಲವು ದೇಶಗಳಲ್ಲಿ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತಿದೆ.

ಆಕ್ಸಿಜನ್ ಪೂರೈಸಲು ಆಕ್ಸಿಜನ್ ರೈಲು, ವಿಮಾನ, ಹಡಗು ಸೇರಿದಂತೆ ಎಲ್ಲ ಸಾರಿಗೆಯನ್ನ ಬಳಸಲಾಯ್ತು.

ಎಲ್ಲೆಲ್ಲಿ ಆಕ್ಸಿಜನ್ ಸಿಗ್ತಿತ್ತೋ ಅದನ್ನು ಹುಡುಕಿ ತರಲಾಯ್ತು. ಜೊತೆಗೆ ಆಕ್ಸಿಜನ್ ತಯಾರಿಕೆಯನ್ನೂ ಅಭಿವೃದ್ಧಿಪಡಿಸಿಕೊಳ್ಳಲಾಯ್ತು.

ಕೊರೊನಾದಂಥ ಅದೃಶ್ಯ ಮತ್ತು ರೂಪ ಬದಲಿಸುವ ಏಕೈಕ ಪ್ರಮುಖ ಅಸ್ತ್ರ ಕೊವಿಡ್ ಪ್ರೋಟೋಕಾಲ್.

ಈಗ ಜಗತ್ತಿನಾದ್ಯಂತ ವ್ಯಾಕ್ಸಿನ್‌ಗೆ ಭಾರೀ ಬೇಡಿಕೆ ಇದೆ. ವ್ಯಾಕ್ಸಿನ್ ತಯಾರಿಸುತ್ತಿರುವ ದೇಶಗಳು ತುಂಬಾ ಕಡಿಮೆ ಇವೆ.

ನಮ್ಮ ದೇಶದಲ್ಲಿ ವ್ಯಾಕ್ಸಿನ್ ತಯಾರಿಸದಿದ್ದರೆ ಭಾರತದಂಥ ದೇಶವನ್ನ ರಕ್ಷಿಸುವುದು ಕಷ್ಟವಾಗಿತ್ತು.

Share this News
error: Content is protected !!