June 13, 2021

BREAKING NEWS| ಕಡಿಮೆಯಾಯ್ತು ಅನ್ನುವಾಗಲೇ ರಣಕೇಕೆ ಹಾಕಿದ ಕೊರೋನಾ: ಇವತ್ತು ಹತ್ತು ಜನರ ಮರಣ; 495 ಕ್ಕೆ ಏರಿದ ಮೃತರ ಸಂಖ್ಯೆ.!

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಜೂನ್.7 ರಂದು ಸೋಮವಾರ ಕೊರೋನಾ ಸೋಂಕು ಮತ್ತೆ ಅಬ್ಬರಿಸಿರುವುದು ವರದಿಯಾಗಿದೆ. 10 ಜನರು ಮರಣ ಹೊಂದಿದ್ದು, 178 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜೂನ್.7ರಂದು ರಂದು ಸಂಜೆ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಆರೋಗ್ಯ ಇಲಾಖೆ ದೃಢಪಡಿಸಿದೆ.

ಮೃತಪಟ್ಟಿರುವ 10 ಜನರಲ್ಲಿ ಹಾವೇರಿ ತಾಲೂಕಿನಲ್ಲಿ -5 ರಾಣೇಬೆನ್ನೂರು ತಾಲೂಕಿನಲ್ಲಿ-4, ಬ್ಯಾಡಗಿ ತಾಲೂಕಿನಲ್ಲಿ-1 ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು 10 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮಾವಳಿಯ ಪ್ರಕಾರ ಕೈಗೊಳ್ಳಲಾಗಿದೆ.

ಜೂನ್.7 ರಂದು ರಂದು ಬ್ಯಾಡಗಿ-50, ಹಾನಗಲ್ಲ-5 ಹಾವೇರಿ-20, ಹಿರೇಕೆರೂರು-11, ರಾಣೇಬೆನ್ನೂರು-83, ಸವಣೂರು-3, ಶಿಗ್ಗಾವ-7, ಪ್ರಕರಣಗಳಿದ್ದು. ಜಿಲ್ಲೆಯಲ್ಲಿ 178 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ 20925 ಪ್ರಕರಣಗಳಾಗಿವೆ. ಕೋವಿಡ್ ಪಾಸಿಟಿವ ಪ್ರಕರಣಗಳಲ್ಲಿ 19327 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜೂನ್.7 ರಂದು 211 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಮವಾರ ದೃಢಪಡಿಸಲಾದ 10 ಜನರ ಮರಣ ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 495 ಜನರು ಕೊರೋನಾ ರೋಗಕ್ಕೆ ಮೃತಪಟ್ಟಿದ್ದಾರೆ.

Share this News
error: Content is protected !!