June 13, 2021

PUBG MOBILE| 2 ಕೋಟಿ ದಾಟಿದ ಪ್ರಿ-ರೆಜಿಸ್ಟ್ರೇಷನ್; ಜೂನ್ 18ಕ್ಕೆ BATTLEGROUNDS MOBILE INDIA ಹೆಸರಿನೊಂದಿಗೆ ಮತ್ತೆ ಅಬ್ಬರಿಸಲಿದೆಯಾ PUBG.!?

ಭಾರತೀಯರ ಸ್ಮಾರ್ಟ್‌ಫೋನ್‌ಗಳನ್ನು ವ್ಯಾಪಕವಾಗಿ ಆವರಿಸಿ, ನಂತರ ನಿಷೇಧಕ್ಕೊಳಗಾಗಿದ್ದ pubg ಆಟವು ಹೊಸ ರೂಪದಲ್ಲಿ ಮತ್ತೆ ಅಬ್ಬರಿಸಲು ಸಿದ್ಧವಾಗಿದೆ. ಇದೇ ಜೂನ್‌ ತಿಂಗಳ ಮೂರನೇ ವಾರದಲ್ಲಿ ʼbattlegrounds mobile indiaʼ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡುಗಡೆ ಮಾಡುವುದಾಗಿ pubg ಮಾಲೀಕ ಕಂಪನಿ ಕ್ರ್ಯಾಫ್ಟನ್ ತಿಳಿಸಿದೆ.

ʼbattle ground mobile indiaʼ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಈಗಾಗಲೇ ಪ್ರಿ-ರಿಜಿಸ್ಟ್ರೇಷನ್‌ ಆರಂಭವಾಗಿದೆ. ಎರಡು ವಾರದಲ್ಲಿ ಬರೋಬ್ಬರಿ 2 ಕೋಟಿ ಜನರು ರಿಜಿಸ್ಟರ್‌ ಆಗಿದ್ದಾರೆ. ರಿಜಿಸ್ಟರ್‌ ಆದವರಿಗೆ ಬೇರೆಯವರಿಗಿಂತ ಮೊದಲೇ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶ ಸಿಗಲಿದೆ ಎಂದು ಪ್ರಕಟಣೆಯಲ್ಲಿ ಕ್ರ್ಯಾಫ್ಟನ್‌ ತಿಳಿಸಿದೆ.

ದೇಶದ ಭದ್ರತೆಗೆ ಹಾಗೂ ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗುತ್ತಿದೆ ಎಂಬ ಕಾರಣ ನೀಡಿ, ಭಾರತ ಸರ್ಕಾರವು 2020ರ ಸೆಪ್ಟೆಂಬರ್‌ನಲ್ಲಿ pubg ಸೇರಿದಂತೆ ಹಲವು ಆ್ಯಪ್‌ಗಳನ್ನು ಬ್ಯಾನ್‌ ಮಾಡಿತ್ತು. ನಿಷೇಧಕ್ಕೂ ಮುನ್ನ ಭಾರತದ 5 ಕೋಟಿಗೂ ಹೆಚ್ಚು ಜನರು ಪಬ್ಜಿ ಆಟಗಾರರಾಗಿದ್ದರು ಹಾಗೂ ಆ ಪೈಕಿ 1.3 ಕೋಟಿ ಮಂದಿ ಪ್ರತಿದಿನ pubg ಆಡುತ್ತಿದ್ದರು.

ಪ್ರಿ-ರಿಜಿಸ್ಟ್ರೇಷನ್‌ ಹೇಗೆ?
ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Battlegrounds Mobile India ಎಂದು ಸರ್ಚ್‌ ಮಾಡಿದರೆ ಈ ಆ್ಯಪ್‌ ಕಾಣಿಸುತ್ತದೆ. ಅಲ್ಲಿ ʼಪ್ರಿ-ರಿಜಿಸ್ಟರ್‌ʼ ಎಂಬುದನ್ನು ಮುಟ್ಟಿದರೆ ರಿಜಿಸ್ಟರ್‌ ಆದಂತೆ. ರಿಜಿಸ್ಟರ್‌ ಆದವರು ಆ್ಯಪ್‌ ಬಿಡುಗಡೆಯಾದ ಕೂಡಲೇ ಡೌನ್‌ಲೋಡ್‌ ಮಾಡಿಕೊಳ್ಳಲು ನೋಟಿಫಿಕೇಷನ್‌ ಪಡೆಯಬಹುದು.

ಹೊಸ ಫೀಚರ್‌ಗಳು:
ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ pubg ಯ ಹೊಸ ಅವತಾರವು ಹಳೆಯ ಆಟಕ್ಕಿಂತ ಹೆಚ್ಚು ಆಕರ್ಷಕವಾಗಿರಲಿದೆ. ಇನ್ನಷ್ಟು ಆಯುಧಗಳು, ವಿನೂತನ ಕಟ್ಟಡಗಳು, ಮನಮೋಹಕ ಪರಿಸರವನ್ನು ನೂತನ ಆ್ಯಪ್‌ ಹೊಂದಿರಲಿದೆ. ನಿಧಾನವಾದ ನೆಟ್ವರ್ಕ್‌ನಲ್ಲೂ ಆಟವಾಡಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿದೆ ಎನ್ನಲಾಗಿದೆ.

ಚೀನಾದೊಂದಿಗೆ ಸಂಬಂಧ ಕಟ್:
ದಕ್ಷಿಣ ಕೊರಿಯಾ ಮೂಲದ ಕಂಪನಿಯಾದ ಕ್ರ್ಯಾಫ್ಟನ್‌ ಸಂಸ್ಥೆಯು ಚೀನಾದ ಟೆನ್ಸೆಂಟ್‌ ಕಂಪನಿಯ ಜೊತೆಗೂಡಿ ಈ ಹಿಂದೆ ಭಾರತದಲ್ಲಿ pubg ಆಟವನ್ನು ಅಭಿವೃದ್ಧಿಪಡಿಸಿತ್ತು. ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಈಗ ಚೀನಾದ ಕಂಪನಿಯ ಸಹಾಯವಿಲ್ಲದೇ ಸ್ವತಂತ್ರವಾಗಿ ಆ್ಯಪ್‌ ಬಿಡುಗಡೆ ಮಾಡುತ್ತಿದೆ.

Share this News
error: Content is protected !!