June 18, 2021

ಸಾಯಂಕಾಲ ಅಂತ್ಯಕ್ರಿಯೆ| 12ಕ್ಕೆ ಹಾವೇರಿಗೆ ಉದಾಸಿ ಪಾರ್ಥೀವ ಶರೀರ; ಹಾಲಗಲ್ ವಿರಕ್ತ ಮಠದ ಆವರಣದಲ್ಲಿ ಅಂತೀಮ ದರ್ಶನಕ್ಕೆ ವ್ಯವಸ್ಥೆ.!

ಹಾವೇರಿ- ಹಾನಗಲ್ ಹಾಲಿ ಶಾಸಕ ಹಾಗೂ ಮಾಜಿ‌ ಸಚಿವ ಸಿ.ಎಂ.ಉದಾಸಿ ನಿನ್ನೆ ಮಧ್ಯಾಹ್ನ ಅನಾರೋಗ್ಯ ಹಿನ್ನೆಲೆಯಲ್ಲಿ ವಿಧಿವಶರಾಗಿದ್ದಾರೆ. ಇವರಿಗೆ 85 ವರ್ಷ ವಯಸ್ಸಾಗಿತ್ತು. ‌ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.‌ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಾಧ್ಯಾನ್ಹ 2 ಗಂಟೆ 48 ನಿಮಿಷಕ್ಕೆ ನಿಧನರಾಗಿದ್ದಾರೆ.

ನಿಧನದ ಸುದ್ದಿ ತಿಳಿದು ಹಾನಗಲ್ ಪಟ್ಟಣದ ಗೌಳಿ ಗಲ್ಲಿಯಲ್ಲಿರುವ ಉದಾಸಿ‌ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ಉದಾಸಿ‌‌ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು, ಸಂಬಂಧಿಕರು ಹಾಗೂ ಅಭಿಮಾನಿಗಳು ಆಗಮಿಸಿ ‌ಪತ್ನಿ ನೀಲಮ್ಮಗೆ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಇವತ್ತು ಬೆಳಗ್ಗೆ ಸಿ.ಎಂ.ಉದಾಸಿಯ ಪಾರ್ಥೀವ ಶರೀರ 12 ಗಂಟೆಗೆ ಹಾನಗಲ್ ‌ಪಟ್ಟಣಕ್ಕೆ ಆಗಮಿಸಲಿದೆ. ನಂತರ ಹಾನಗಲ್ ಪಟ್ಟಣದ ವಿರಕ್ತಮಠದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ‌ ನಡೆಯಲಿದೆ. ಮಧ್ಯಾಹ್ನ ಒಂದು ಗಂಟೆಗೆ ಪಟ್ಟಣದ ಗೌಳಿ ಗಲ್ಲಿಯಲ್ಲಿರುವ ನಿವಾಸದಲ್ಲಿ ಪಾರ್ಥೀವ ಶರೀರಕ್ಕೆ ಪೂಜೆಯನ್ನು ಕುಟುಂಬಸ್ಥರು ನೆರವೇರಿಸಲಿದ್ದಾರೆ. ಒಂದು ಗಂಟೆ ನಂತರ ಪಟ್ಟಣದ ವಿರಕ್ತಮಠದ ಆವರಣದಲ್ಲಿ ಪಾರ್ಥೀವ ಶರೀರ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ ನಾಲ್ಕು ಗಂಟೆಗೆ ಲಿಂಗಾಯತ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ‌ ಎಂದು ಕುಟುಂಬದ‌ ಮೂಲಗಳಿಂದ ತಿಳಿದು ಬಂದಿದೆ.

ಅಲ್ಲದೆ ‌ಅಂತ್ಯಕ್ರಿಯೆ ನಡೆಯುವ ಪಟ್ಟಣದ ವಿರಕ್ತಮಠದ ರುದ್ರಭೂಮಿಯ ಸ್ಥಳವನ್ನು‌ ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಮಿಶ್ರಾ, ಹೆಚ್ಚುವರಿ ಎಸ್ಪಿ ವಿಜಯಕುಮಾರ, ಎಸಿ ಅನ್ನಪೂರ್ಣ ಮುದಕಮ್ಮನವರ ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳ ಪರಿಶೀಲನೆ‌ ನಡೆಸಿದ್ದಾರೆ.

______

______

Share this News
error: Content is protected !!