June 18, 2021

TODAY IN HISTORY| ಹಾವೇರಿ ಗೋಲಿಬಾರ್ ಗೆ 14 ವರ್ಷ; ರೈತ ಸಂಘಟನೆಗಳಿಂದ ರೈತ ಹುತಾತ್ಮ ದಿನಾಚರಣೆ.!

ಹಾವೇರಿ -ಇತಿಹಾಸದಲ್ಲಿ ಈ ದಿನವನ್ನು ಹಾವೇರಿ ಎಂದು ಮರೆಯುವುದಿಲ್ಲ.  ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ಹಾವೇರಿ ಜಿಲ್ಲೆಯಲ್ಲಿ 2008 ಜೂನ್ 10 ರಂದು ಗೋಲಿಬಾರ್ ನಡೆದಿತ್ತು. ಇಬ್ಬರು ರೈತರು ಪೊಲೀಸ್ ಗುಂಡಿಗೆ ಬಲಿಯಾಗಿದ್ದರು. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಅಂದು ಬಲಿಯಾದ ಹುತಾತ್ಮರ ನೆನಪಿಗಾಗಿ ಇವತ್ತು ಹಾವೇರಿ ಹೊಸಮನಿ‌ ಸಿದ್ದಪ್ಪ ವೃತ್ತದಲ್ಲಿ 14 ನೆ ವರ್ಷದ ರೈತ ಹುತಾತ್ಮ ದಿನಾಚರಣೆ ಆಚರಣೆ ಮಾಡಿದರು. ಗೋಲಿಬಾರನಲ್ಲಿ ಹುತಾತ್ಮರಾದ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿಯ ವೀರಗಲ್ಲಿಗೆ ರೈತರು ಮಾಲಾರ್ಪಣೆ ಮಾಡಿದರು.

ನಂತರ ಮಾತನಾಡಿದ ರೈತರ ಮುಖಂಡರು ಕೇಂದ್ರ ಸರ್ಕಾರ ಜಾರಿಗೆ ಮಾಡುತ್ತಿರೋ ರೈತ ವಿರೋಧಿ ಕಾನೂನುಗಳನ್ನ ನಿಷೇಧ ಮಾಡಬೇಕು. ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ, ಬಿತ್ತನೆ ಬೀಜ ಸಿಗುವಂತೆ ಮಾಡಬೇಕು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು.

 

ರಾಜ್ಯ ಮತ್ತು ಕೇಂದ್ರ ಸರ್ಕಾರದ ರೈತರಿಗೆ ಕೊವೀಡ್ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು . ಕೊವೀಡ್ ಸಂದರ್ಭದಲ್ಲಿ ಅನ್ನದಾತರು ಬಹುತೇಕ ರೈತರು ಸಂಕಷ್ಟವನ್ನ ಎದುರಿಸಿದ್ದಾರೆ. ಎಲ್ಲಾ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ, ರೈತರಿಗೆ ೨೪ ಸಾವಿರ ಘೋಷಣೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ರೈತ ಹುತಾತ್ಮ ದಿನಾಚರಣೆಯಲ್ಲಿ ರೈತ ಮುಖಂಡರು ಸೇರಿದಂತೆ ರೈತರು ಭಾಗವಹಿಸಿದ್ದರು.

Share this News
error: Content is protected !!