June 22, 2021

HAVERI | ಹಿರಿಯ ನಾಗರಿಕರಿಗೆ ಪ್ರಯಾಣದರ ಶೇ.25 ರಿಯಾಯಿತಿ ಮುಂದುವರಿಕೆ.

ಹಾವೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಿರಿಯ ನಾಗರಿಕರ ಪ್ರಯಾಣದರ ರಿಯಾಯಿತಿ ಸೌಲಭ್ಯವನ್ನು ಫೆಬ್ರುವರಿ 10 ರಿಂದ ಮುಂದುವರಿಸಿ ಆದೇಶ ಹೊರಡಿಸಿದೆ.

ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಿಯಾಯಿತಿ ಸೌಲಭ್ಯವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು.

ಹಿರಿಯನಾಗರಿಕರ ರಿಯಾಯಿತಿ ದರ ಸೌಲಭ್ಯವನ್ನು ಪುನಃ ಆರಂಭಿಸಲಾಗಿದ್ದು, ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this News
error: Content is protected !!