June 13, 2021

ಭಟ್ಕಳದಲ್ಲಿ ಪಾಕಿಸ್ತಾನ ಮೂಲದ ಮಹಿಳೆ ಬಂಧನ; ಎಂಟು ವರ್ಷಗಳಿಂದ ಅಕ್ರಮವಾಗಿ ವಾಸ.!

ಕಾರವಾರ: ಎಂಟು ವರ್ಷದಿಂದ ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಖತೀಜಾ ಜಾವೇದ್ ಎಂಬಾಕೆ ಅಕ್ರಮವಾಗಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ವಾಸವಿದ್ದಳು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 8 ವರ್ಷದ ಹಿಂದೆ  ದುಬೈನಲ್ಲಿ ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ರುಕ್ಷುದ್ದೀನ್ ಎಂಬುವವರನ್ನು ಖತೀಜಾ ವಿವಾಹವಾಗಿದ್ದಳು.

2014ರಲ್ಲಿ ಪ್ರವಾಸಿ ವೀಸಾ ಪಡೆದಿದ್ದ ಖತೀಜಾ, 3 ತಿಂಗಳು ಭಾರತದಲ್ಲಿದ್ದು ವಾಪಸ್ ಹೋಗಿದ್ದಳು. ಮತ್ತೆ ಕಳ್ಳಮಾರ್ಗದ ಮೂಲಕ ಭಾರತ ಪ್ರವೇಶ ಮಾಡಿ 8 ವರ್ಷಗಳಿಂದ 3 ಮಕ್ಕಳೊಂದಿಗೆ ಭಟ್ಕಳದಲ್ಲೇ ವಾಸವಿದ್ದಳು. ಸುಳ್ಳು ದಾಖಲೆ ನೀಡಿ ವೋಟರ್ ಐಡಿ, ರೇಷನ್ ಕಾರ್ಡ್, ಜನ್ಮದಾಖಲೆ ಪಡೆದಿರುವುದು ಈ ವೇಳೆ ಬೆಳಕಿಗೆ ಬಂದಿದೆ. ಐಪಿಸಿ ಸೆಕ್ಷನ್ 468, 471 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Share this News
error: Content is protected !!