June 13, 2021

ನಾನು ಮೊದಲೇ ಹೇಳಿದ್ದೇನೆ ಸಿಎಂ ಬದಲಾವಣೆ ಆಗುವುದಿಲ್ಲ. -ಡಿಸಿಎಂ ಗೋವಿಂದ ಕಾರಜೋಳ.!

ಹಾವೇರಿ – ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದಿಲ್ಲ ಎಂಬುದನ್ನ ನಾನು ಮೊದಲಿನಿಂದಲೂ ಅದನ್ನ ಹೇಳಿದ್ದೇನೆ. ಲಾಕ್ ಡೌನ್ ಮುಂದುವರೆಸೋ ಅವಶ್ಯಕತೆ ಇದೆ ಎಂಬ ಸಲಹೆ ಕೊಟ್ಟಿದ್ದೇನೆ‌ ಎಂದು ಡಿಸಿಎಂ‌ ಗೋವಿಂದ ಕಾರಜೋಳ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ಹಿರಿಯ ಶಾಸಕ ಸಿ.ಎಂ.ಉದಾಸಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು ಕಟ್ಟಡ ಕಾಮಗಾರಿಗೆ, ಕಟ್ಟಡ ಕಟ್ಟಲು ಬೇಕಾದ ಸಾಮಗ್ರಿಗಳ ಮಾರಾಟ, ಆಟೋಮೊಬೈಲ್ ಸೇರಿದಂತೆ ಕೆಲವೊಂದು ಸಡಿಲಿಕೆ ಮಾಡಬೇಕು. ಹೀಗೆ ಅನೇಕ ವಿಚಾರಗಳನ್ನ ಹೇಳಿದ್ದೇನೆ.ಸಂಜೆ ಮುಖ್ಯಮಂತ್ರಿಗಳು‌ ತಜ್ಞರ ಸಮಿತಿ ಸಭೆ ನಡೆಸಿ ಯಾವ ರೀತಿ ಗೈಡಲೈನ್ಸ್ ಕೊಡ್ತಾರೋ ಆ ರೀತಿ ನಡೆದುಕೊಳುತ್ತೇವೆ ಎಂದರು.‌

ಶಾಸಕ ಸಿ.ಎಂ.ಉದಾಸಿ ನಮಗೆಲ್ಲ ಉತ್ತಮ ಮಾರ್ಗದರ್ಶಕರಾಗಿದ್ದರು. ಕೇವಲ ಜಿಲ್ಲೆ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಸಚಿವರಾಗಿ ಸಾಕಷ್ಟು ಕೆಲಸಗಳನ್ನ ಮಾಡಿದ್ದಾರೆ‌. ಶಾಸಕ ಸಿ.ಎಂ.ಉದಾಸಿ ಅವರಂತೆ ಅವರ ಕೆಲಸಗಳನ್ನ ಅವರ ಕುಟುಂಬದವರು ಮುಂದುವರೆಸಿಕೊಂಡು ಹೋಗಲಿ ಡಿ.ಸಿ.ಎಂ‌ ಗೋವಿಂದ ಕಾರಜೋಳ ಹೇಳಿದ್ದಾರೆ.

Share this News
error: Content is protected !!