June 18, 2021

ಅರಿವು ಮೂಡಿಸಲು ಸೋಂಕಿತರೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಡಾಕ್ಟರ್.!

ಹಾವೇರಿ – ಕೊರೋನಾ ಸೋಂಕು ಅಂದರೆ ಎಲ್ಲರಿಗೂ ಭಯ.‌ಸೊಂಕಿತರ ಹತ್ತಿರ ಹೋಗಲು ಭಯ ಪಡುತ್ತಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಬರ್ತ್ ಡೇಯನ್ನ ಸಮುದಾಯ ಆರೋಗ್ಯಾಧಿಕಾರಿ ಆಚರಿಸಿಕೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಲಕೇರಿ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದಿದೆ.

ಕೊರೊನಾ ಸೋಂಕಿತರಿಗೆ ಆತ್ಮಸ್ತೈರ್ಯ ತುಂಬಲು ಸೋಂಕಿತರೊಂದಿಗೆ ಆರೋಗ್ಯ ಅಧಿಕಾರಿ ಸಂಜೀವ ಗಾಜೀಗೌಡ್ರ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. 2 ಕೆ.ಜಿ ಕೇಕ್ ತೆಗೆದುಕೊಂಡು ಬಂದು ಸೋಂಕಿತರ ಜೊತೆ 33ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ.

 

ಕೋವಿಡ್‌ ಕೇರ್‌ ಸೆಂಟರ್ ನಲ್ಲೇ‌ ನೈಟ್ ಡ್ಯೂಟಿ ಇದ್ದಿದ್ದರಿಂದ‌ ಪಿಪಿಇ ಕಿಟ್ ಧರಿಸಿಕೊಂಡು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅನ್ನುವ ಹಾಡಿಗೆ ಸೋಂಕಿತರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು ಮತ್ತು ತಂದೆ ತಾಯಿ ಇದ್ದರು ಸೋಂಕಿತರಲ್ಲಿ ಆತ್ಮಸ್ತೈರ್ಯ ತುಂಬಲು ಕೋವಿಡ್ ಕೇರ್ ಸೆಂಟರ್ ನಲ್ಲಿ ಬರ್ತ್ ಡೇ ಆಚರಣೆ ‌ಮಾಡಿದ್ದು ವಿಶೇಷವಾಗಿತ್ತು.

 

_____

Share this News
error: Content is protected !!