June 13, 2021

ಸಾಮಾಜಿಕ ಅಂತರ ಮರೆತ ಹಾವೇರಿ ಕಾಂಗ್ರೇಸ್ ನಾಯಕರು: ಪೆಟ್ರೋಲ್ & ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ನಿಂದ ತಟ್ಟೆ ಬಾರಿಸಿ ಪ್ರತಿಭಟನೆ.!

ಹಾವೇರಿ- ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಹಾವೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಟ್ಟೆ ಬಾರಿಸಿ ಪ್ರತಿಭಟನೆ‌ ನಡೆಸಿದರು. ನಗರದ ಮಾಗಾವಿ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ,ತಟ್ಟೆ ಬಾರಿಸಿ ಬೆಲೆ ಏರಿಕೆ ಮಾಡಿದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಬೆಲೆ ಏರಿಕೆಯಿಂದ ಜನರು ಸಾಕಷ್ಟು ಸಮಸ್ಯೆಗೆ ಒಳಗಾಗಿದ್ದಾರೆ. ಕೋವಿಡ್ ನಿಂದಾಗಿ ಸಾಕಷ್ಟು ಸಾವುಗಳು ಸಂಭವಿಸುತ್ತಿವೆ. ಮೋದಿಯವರು ಅಚ್ಚೆ ದಿನ ಅಂತಾ ಹೆಣಗಳ ಮೇಲೆ ಅಧಿಕಾರ ಮಾಡ್ತಿದ್ದಾರೆ. ಲಾಕ್ ಡೌನ್ ನಿಂದ ಜನರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಇಂಥಾ ಕೆಟ್ಟ ಪರಿಸ್ಥಿತಿಯಲ್ಲಿ ಹೊಟ್ಟೆಗೆ ಅನ್ನ ತಿನ್ನೋರು ಇದನ್ನ ಯೋಚನೆ ಮಾಡ್ತಾರೆ. ಹೊಟ್ಟೆಗೆ ಅನ್ನ ತಿನ್ನದೆ ಇದ್ದೋರು, ಇನ್ನು ಏನೇನೋ‌ ತಿನ್ನೋರು ಅಂತಾ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ವಾಧಿಕಾರಿ ಮೋದಿಯವರು ಬಡವರ ಹೊಟ್ಟೆ ಮೇಲೆ ಹೊಡಿತಿದ್ದಾರೆ.ಇದು ದೊಡ್ಡ ಅನ್ಯಾಯ.

ಇದನ್ನ ಸರಿಪಡಿಸಬೇಕು. ಇಲ್ಲದಿದ್ದರೆ ದೇಶದ ಜನರು ದಂಗೆ ಎದ್ದು ಮೋದಿಯವರನ್ನ ಓಡಿಸ್ಯಾಡಿ ಸಮುದ್ರಕ್ಕೆ ಒಯ್ತಾರೋ, ಆಕಾಶಕ್ಕೆ ಒಯ್ತಾರೋ ಕಾದು ನೋಡಬೇಕು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯ ವೇಳೆಯಲ್ಲಿ ತಮ್ಮ ಜವಬ್ದಾರಿಯುತ ಅರಿತು ನಡೆದುಕೊಳ್ಳಬೇಕಾಗಿದ್ದ ಮಾಜಿ ಸಚಿವರು, ಕಾಂಗ್ರೇಸ್ ನಾಯಕರುಗಳು ಮತ್ತು ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಪ್ರತಿಭಟನೆ ನಡೆಸಿದರು.

Share this News
error: Content is protected !!