July 25, 2021

SACHARI VIJAY | 7 ಜನರಿಗೆ ಹೊಸ ಜೀವನ: ಸಾವಿನ ನಂತರವೂ ಸಂಚಾರಿಯ‌ ಸಾರ್ಥಕ ಜೀವನ.!

ಬೆಂಗಳೂರು: ನಟ ಸಂಚಾರಿ ವಿಜಯ್ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಇಂದು ಮುಂಜಾನೆ 3.34ರ ಸುಮಾರಿಗೆ ಅವರ ಹೃದಯಬಡಿತ ನಿಂತಿದೆ. ಸದ್ಯ ಮರಣೋತ್ತರ ಪರೀಕ್ಷೆ ನಡೆದಿದ್ದು, 7 ಗಂಟೆಯೊಳಗೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಇದೀಗ ವಿಜಯ್ ಮೃತದೇಹವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ‌ರ ಅಂತೀಮ‌ ದರ್ಶನಕ್ಕೆ ಇಡಲಾಗಿದೆ.

ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಈ ಮೂಲಕ ಸಾವಿನಲ್ಲೂ ಸಂಚಾರಿ ವಿಜಯ ಸಾರ್ಥಕತೆ ಮೆರೆದಿದ್ದಾರೆ. ಅವರ ಅಂಗಾಗಗಳಿಂದ 7 ಜನರಿಗೆ ಜೀವನ ಸಿಕ್ಕಂತಾಗಿದೆ. ಒಂದು ಲಿವರ್, ಎರಡು ಕಣ್ಣು, ಎರಡು ಕಿಡ್ನಿ, ಎರಡು ಹಾರ್ಟ್ ವಾಲ್ಸ್ ತೆಗೆದುಕೊಳ್ಳಲಾಗಿದೆ.

ಮರಣೋತ್ತರ ಪರೀಕ್ಷೆ ಮುಗಿದ ಕೂಡಲೇ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಈಗಾಗಲೇ ಸಂಚಾರಿ ವಿಜಯ್ ದೇಹದ ಅಂಗಾಂಗಗಳನ್ನು ಅವಶ್ಯಕ ಇರುವವರ ದೇಹಕ್ಕೆ ನೀಡಲಾಗಿದೆ. ಸಂಬಂಧಪಟ್ಟ ಆಸ್ಪತ್ರೆಯವರು ತೆಗೆದುಕೊಂಡು ಹೋಗಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿ ಅಂಗಾಂಗ ಕಸಿ ಮಾಡಿದ್ದಾರೆ. ಅಂತ ಜೀವ ಸಾರ್ಥಕತೆ ತಂಡದ ನೌಷದ್ ಪಾಶ ಹೇಳಿದ್ದಾರೆ.

Share this News
error: Content is protected !!