July 25, 2021

ಸಂಕಷ್ಟದ ನಡುವೆ ಸಂಭ್ರಮ ತಂದ ಗೋಮಾತೆ; ಹಸುವಿಗೆ ಚೊಚ್ಚಲ ಸೀಮಂತ ಕಾರ್ಯ ಮಾಡಿ ಸಂಭ್ರಮಿಸಿದ ರೈತ ಕುಟುಂಬ.!

ಹಾವೇರಿ – ಮನೆಯಲ್ಲಿ ಚೊಚ್ಚಲ ಗರ್ಭಿಣಿ ಮಹಿಳೆಯಗೆ ಸೀಮಂತ ಕಾರ್ಯ ಮಾಡುವುದು ಸಾಮಾನ್ಯ. ಅದರೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದಲ್ಲಿ ಹಸುವಿಗೆ ಸೀಮಂತ ಕಾರ್ಯ ಮಾಡಿದ ಘಟನೆ ನಡೆದಿದೆ. ಗ್ರಾಮದ ರೈತ ನವೀನ ಹುಣಸೀಹಳ್ಳಿ ಎಂಬುವರ ಮನೆಯಲ್ಲಿ ಚೊಚ್ಚಲ ಗರ್ಭಿಣಿ ಹಸುವಿಗೆ ಸೀಮಂತ ಕಾರ್ಯ ಮಾಡಿ ಕುಟುಂಬಸ್ಥರು ಸಂಭ್ರಮಿಸಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ಮನೆಯಲ್ಲೇ ಜನಿಸಿದ್ದ ಹಸುವನ್ನು ಮನೆಯ ಮಗಳಂತೆ ಸಾಕಿ ಬೆಳೆಸಿದ್ದಾರೆ. ಈಗ ಹಸು ಏಳು ತಿಂಗಳ ಚೊಚ್ಚಲ ಗರ್ಭೀಣಿ ಆಗಿದ್ದರಿಂದ ಕುಟುಂಬದ ಸದಸ್ಯರು ಹಸುವಿನ ಮೈಮೇಲೆ ಹೊಸ ಸೀರೆ ಹಾಕಿ, ಹಸುವಿಗೆ ಪೂಜೆ ಸಲ್ಲಿಸಿದ್ದಾರೆ.

ಮನೆಯಲ್ಲಿ ತರಹೇವಾರಿ ತಿನಿಸು ರೊಟ್ಟಿ, ಎಳ್ಳು ರೊಟ್ಟಿ, ಕಡಬು, ಹೋಳಿಗೆ ಸೇರಿದಂತೆ ವಿವಿಧ ತಿನ್ನಿಸಿಯನ್ನು ಹಸುವಿಗೆ ತಿನ್ನಿಸಿ ರೈತ ಕುಟುಂಬ ಸೀಮಂತವನ್ನು ಅದ್ದೂರಿಯಾಗಿ ಮಾಡಿದ್ದಾರೆ.

 

_____

Share this News
error: Content is protected !!