July 25, 2021

ಬೈಕ್ ಸವಾರರೇ ಎಚ್ಚರ| ಜಿಲ್ಲೆಯಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಬೈಕ ಕಳ್ಳರ ದೊಡ್ಡ ಜಾಲ: ಲಾಕ್ಡೌನ್ ನಲ್ಲಿ 40-50 ಬೈಕ್ ಗಳನ್ನು ಕಳ್ಳರು ಹೊತ್ತೊಯ್ದಿರುವ ಶಂಕೆ.!?

ರಾಣೇಬೆನ್ನೂರು- ಜಿಲ್ಲೆಯಲ್ಲಿ ಮನೆ, ಅಂಗಡಿಗಳ ಮುಂದೆ ನಿಲ್ಲಿಸಿದ ಬೈಕ್ ಗಳನ್ನು ಖದೀಮರು ಕ್ಷಣಾರ್ಧದಲ್ಲಿ ಎಸ್ಕೇಪ‌ ಮಾಡಿಕೊಂಡು ಹೋಗುತ್ತಿದ್ದಾರೆ. ಬೆಲೆ ಬಾಳುವ ಬೈಕ್ ಗಳನ್ನೆ ಟಾರ್ಗೆಟ್ ಮಾಡಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ‌. ಅದ್ರಲ್ಲೂ ಕೊರೊನಾ ಎರಡನೆ ಅಲೆಯ ಲಾಕ್ಡೌನ್ ಟೈಮ್ನನಲ್ಲೇ ಜಿಲ್ಲೆಯಲ್ಲಿ ಅತಿ ಹೆಚ್ಚು ಬೈಕ್ ಕಳ್ಳತನದ ಹತ್ತೊಂಬತ್ತು ಪ್ರಕರಣಗಳು ದಾಖಲಾಗಿವೆ. ಒಂದೆರಡು ಪ್ರಕರಣಗಳಲ್ಲಿ ಕದ್ದ ಬೈಕ್ ಗಳ ಬಿಡಿಭಾಗಗಳನ್ನು ಬಿಚ್ಚಿ ಬೈಕು ಯಾವುದಕ್ಕೂ ಬಾರದಂತೆ ಮಾಡಿ ಎಸೆದು ಹೋಗಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಒಟ್ಟು ಹತ್ತೊಂಬತ್ತು ಪೊಲೀಸ್ ಠಾಣೆಗಳಿವೆ. ಹತ್ತೊಂಬತ್ತು ಪೊಲೀಸ್ ಠಾಣೆಗಳ ಪೈಕಿ ವಾರದಲ್ಲಿ ಎರಡ್ಮೂರು ಪೊಲೀಸ್ ಠಾಣೆಗಳಲ್ಲಿ ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗಿರುತ್ತವೆ. ಅದ್ರಲ್ಲೂ ಹೆಮ್ಮಾರಿ ಕೊರೊನಾ ಎರಡನೆ ಅಲೆಯ ಆರ್ಭಟ ಶುರುವಾದ್ಮೇಲೆ ಅಂದ್ರೆ ಏಪ್ರೀಲ್ 1ರಿಂದ ಜೂನ್ 16ರವರೆಗೆ ಜಿಲ್ಲೆಯಲ್ಲಿ ಬರೋಬ್ಬರಿ ಹತ್ತೊಂಬತ್ತು ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕೊರೊನಾ ಲಾಕ್ ಡೌನ್ ಟೈಮ್ ನಲ್ಲಿ ಎಲ್ಲೆಲ್ಲೂ ಪೊಲೀಸರು ಕಂಡುಬಂದರು ಕೂಡ, ಖದೀಮರು ಪೊಲೀಸರ ಕೈಗೆ ಸಿಗದಂತೆ ತಮ್ಮ ಕೈಚಳಕ ತೋರಿಸಿ ಪರಾರಿ ಆಗಿದ್ದಾರೆ. ಮಾರ್ಕೆಟ್ ಗಳಲ್ಲಿ ಹ್ಯಾಂಡ್ ಲಾಕ್ ಮಾಡಿ‌ ನಿಲ್ಲಿಸದ ಬೈಕ್ ಗಳು ಮಾತ್ರವಲ್ಲದೇ ಮನೆಯ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ ಬೈಕ್ ಗಳನ್ನೂ ಖದೀಮರು ಎಗರಿಸಿಕೊಂಡು ಹೋಗಿದ್ದಾರೆ. ಕೊರೊನಾ ಕರ್ತವ್ಯದಲ್ಲಿ ಬ್ಯೂಜಿ ಆಗಿರುವ ಪೊಲೀಸರಿಗೆ ಬೈಕ್ ಕಳ್ಳರನ್ನು ಪತ್ತೆ ಮಾಡುವ ಕೆಲಸ ತಲೆನೋವಾಗಿದೆ. ಆದ್ರೆ ಕಳ್ಳರು ಮಾತ್ರ ತಮ್ಮನ್ಯಾರು ಹಿಡಿಯೋರು ಇಲ್ಲ ಅಂತಾ ತಮ್ಮ ಕೈಚಳಕ ತೋರಿಸುತ್ತಲೇ ಇದ್ದಾರೆ.

ಮಾಹಿತಿ ಪ್ರಕಾರ ಇಡೀ ಜಿಲ್ಲೆಯಲ್ಲಿಯೇ ರಾಣೆಬೆನ್ನೂರು ನಗರದಲ್ಲಿ ಅತೀ ಹೆಚ್ಚಿನ ಬೈಕ್ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಇನ್ನು ಕೆಲವು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಖದೀಮರು ಕದ್ದ ಬೈಕ್ ಗಳಲ್ಲಿ ತಮಗೆ ಬೇಕಾದ ಬೈಕ್ ನ ಭಾಗಗಳನ್ನ ಬಿಚ್ಚಿಕೊಂಡು ಉಪಯೋಗಕ್ಕೆ ಬಾರದಂತಾದ ಬೈಕ್ ನ್ನ ಜನರ ಓಡಾಟವಿಲ್ಲದ ಕಡೆಗಳಲ್ಲಿ ಎಸೆದು ಹೋಗಿದ್ದಾರೆ. ಇದು ಬೈಕ್ ಸವಾರರಿಗೆ ದೊಡ್ಡ ತಲೆ ನೋವಾಗಿದೆ. ಅದರಲ್ಲೂ ಹೆಚ್ಚಾಗಿ ಕಳ್ಳರು ಹೆಚ್ಚೆಚ್ಚು ಬೆಲೆ ಬಾಳುವ ಪಲ್ಸರ್ ತರಹದ ಬೈಕ್ ಗಳನ್ನೆ ಎಗರಿಸಿಕೊಂಡು ಹೋಗುತ್ತಿದ್ದಾರೆ. ಬೈಕ್ ಕಳ್ಳರ ದೊಡ್ಡ ಜಾಲ ಜಿಲ್ಲೆಯಲ್ಲಿ ಸದ್ದಿಲ್ಲದೆ ಕೆಲಸ‌ ಮಾಡುತ್ತಿದೆ ಎನ್ನುವ ಸಂಶಯ ಜಿಲ್ಲೆಯ ಜನರನ್ನು ಕಾಡುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆ ಬೈಕ್ ಕಳ್ಳನೊಬ್ಬ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆಗ ಅತನನ್ನು ಸ್ಥಳೀಯರು ವಿಚಾರಿಸಿದಾಗ ಖದೀಮ ಕದ್ದ ಬೈಕ್ಗಳನ್ನು ಬೆಂಗಳೂರಿಗೆ ಕಳುಹಿಸುತ್ತಿಉವುದಾಗಿ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಹ್ಯಾಂಡ್ ಲಾಕ್‌ ಮಾಡಿರುವ ಬೈಕ್ಗಳನ್ನು ಹೇಗೆ ಕಳ್ಳತನ ಮಾಡುತ್ತಾರೆ ಅನ್ನುವುದನ್ನು ಸಹ ಸ್ಥಳೀಯರ ಬಳಿ ಬಾಯಿಬಿಟ್ಟಿದ್ದಾನೆ. ಬೈಕ್ ಕಳ್ಳನ ಆಡಿಯೋ ಮತ್ತು ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿರುವ ಸ್ಥಳೀಯರು ಖದೀಮ ಮಾಡುತಿದ್ದ ಕೆಲಸವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಬೈಕ್ ಕಳ್ಳತನದ ದಂದೆ ರಾಣೆಬೆನ್ನೂರು ಸೇರಿದಂತೆ ಜಿಲ್ಲೆಯ ಹಲವೆಡೆ ಸದ್ದಿಲ್ಲದೆ ನಡೆಯುತ್ತಿದೆ. ಪೊಲೀಸರು ಕೂಡ ಆಗಾಗ ಖದೀಮರನ್ನು ಬಂಧಿಸಿ ಜೈಲಿಗೆ ಅಟ್ಟುತ್ತಿದ್ದಾರೆ. ಆದರೂ ಬೈಕ್ ಕಳ್ಳರು ಮಾತ್ರ ತಮ್ಮ ಕೈಚಳಕವನ್ನು ತೋರಿಸುತ್ತಲೆ ಇದ್ದಾರೆ.

ಬೈಕ್ ಕಳ್ಳನ‌ ಬಂಧನ:

ಬೈಕ್‌ ಕಳ್ಳತನ ಮಾಡುತ್ತಿದ್ದದ್ದನ್ನು ಸ್ಥಳೀಯರ ಬಳಿ ಬಾಯಿಬಿಟ್ಟ ಆರೋಪಿಯನ್ನು ರಾಣೆಬೆನ್ನೂರು ನಗರ ಠಾಣೆ ಪೊಲೀಸರು ಬಂಧಿಸಿ, ಆತನಿಂದ ಮೂರು ಬೈಕ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಬಂಧಿತನನ್ನು ಇಪ್ಪತ್ತು ವರ್ಷದ ರಾಣೆಬೆನ್ನೂರು ನಗರದ ಆಕಾಶ ಎಂದು ಗುರ್ತಿಸಿಲಾಗಿದೆ. ಆದ್ರೆ ಖದೀಮ ಕದ್ದ ಬೈಕ್ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದು, ಸ್ಥಳೀಯರಿಗೆ ಸಿಕ್ಕಿಬಿದ್ದಾಗ ಬೆಂಗಳೂರಿಗೆ ಕಳಿಸಿದ್ದೇನೆ ಅಂತಾ ಹೇಳಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಆರೋಪಿಯ ಆಡಿಯೋ ಮತ್ತು ವಿಡಿಯೋದ ತುಣುಕುಗಳನ್ನು ಗಮನಿಸಿದರೆ ಬೈಕ್ ಕಳ್ಳರ ಜಾಲ ಸದ್ದಿಲ್ಲದೆ ಕೆಲಸ ಮಾಡ್ತಿದೆ ಅನ್ನುವ ಅನುಮಾನ ಮೂಡುತ್ತಿದೆ. ಆದಷ್ಟು ಬೇಗ ಪೊಲೀಸರು ಬೈಕ್ ಕಳ್ಳರ ಜಾಲ ಬೇದಿಸುವ ಮೂಲಕ ಕಳ್ಳರ ಕೈಚಳಕಕ್ಕೆ ಕಡಿವಾಣ ಹಾಕಬೇಕಿದೆ.

Share this News
error: Content is protected !!