July 25, 2021

ಕದ್ದ ಮೊಬೈಲ್ ಮಾರಾಟ ಜಾಲದ ಮೇಲೆ ಪೊಲೀಸರ ದಾಳಿ: 50 ಮೊಬೈಲ್ ಪೋನ ವಶ; ಆರೋಪಿಗಳ ಬಂಧನ.!

ಹಾವೇರಿ -ಅನುಮಾನಸ್ಪದವಾಗಿ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಮೇಲೆ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ 50 ಮೊಬೈಲ್ ಗಳನ್ನು ವಶಪಡಿಸಿಕೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನಲ್ಲಿ ತಿಳವಳ್ಳಿ ಗ್ರಾಮದಲ್ಲಿ ನಡೆದಿದೆ. ಬಂಧಿಸಿದ ಆರೋಪಿಗಳನ್ನು ನತೀನ್ ಗೌಂಡಿ ಮತ್ತು ಮಧು ಕೆರೇಕ್ಯಾತನಹಳ್ಳಿ ಎಂದು, ಹಾನಗಲ್ ತಾಲ್ಲೂಕಿನಲ್ಲಿ ಹುಲಗಿನಕೊಪ್ಪದ ನಿವಾಸಿಗಳು ಎಂದು ಗುರುತಿಸಲಾಗಿದೆ.

 

ನಿನ್ನೆ ತಿಳವಳ್ಳಿ ಗ್ರಾಮದ ಹರ್ಡೇಕರ ವೃತ್ತದಲ್ಲಿ ಕದ್ದ ಮೊಬೈಲ್ ಮಾರಾಟ ಮಾಡುತ್ತಿದ್ದರು. ಖಚಿತವಾಗಿ ಮಾಹಿತಿ ಆಧರಿಸಿ ಎರಡು ಲಕ್ಷ ರುಪಾಯಿ ಮೌಲ್ಯದ ಐವತ್ತು ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಪಿಐ ಶಿವಶಂಕರ್ ,ಆಡೂರು ಪಿಎಸ್ಐ ನೀಲಪ್ಪ ನೇತ್ರತ್ವದಲ್ಲಿ ದಾಳಿ ಮಾಡಿ ಬಂಧಿಸಿದ್ದಾರೆ. ಹಾನಗಲ್ಲ ತಾಲೂಕಿನ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆಯೂ ಇಂತಹ ಪ್ರಕರಣಗಳು ದಾಖಲಾಗಿವೆ. ಸಧ್ಯ ಲಭ್ಯವಾಗಿರುವ ಎಲ್ಲ ಮೊಬೈಲ್ ಗಳನ್ನು ಎಲ್ಲಿ ಕದಿಯಲಾಗಿದೆ, ಹೇಗೆ ಸಿಕ್ಕಿವೆ, ಸಿಕ್ಕಿರುವ ಮೊಬೈಲ್ ಯಾರವು ಎಂಬ ಮಾಹಿತಿ ಕಲೆ ಹಾಕಲಾಗಿದೆ.

ಜೊತೆಗೆ ಇತ್ತಿಚೆಗೆ ನಿಧನರಾದ ಮಾಜಿ ಸಚಿವ ಸಿ.ಎಂ.ಉದಾಸಿ ನಿಧನದ ಅಂತ್ಯಕ್ರಿಯೆ ವೇಳೆ ಹಲವು ಮೊಬೈಲ್ ಕಳ್ಳತನವಾಗಿದ್ದ ಬಗ್ಗೆ ದೂರು ಕೇಳಿ ಬಂದಿದ್ದವು. ಅವುಗಳಿಗೆ ಈಗ ಸಿಕ್ಕಿರುವ ಮೊಬೈಲ್ ಸಂಬಂಧ ಇರುವ ಮಾಹಿತಿ ಕಲೆ ಹಾಕಲಾಗಿದೆ ಎಂದು ಹಾವೇರಿ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಈ ಪ್ರಕರಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಎಂ ಸಂತೋಷ ಹಾಗೂ ಶಿಗ್ಗಾವಿ ಡಿ ವೈ ಎಸ್ ಪಿ ಓ.ಬಿ.ಕಲ್ಲೇಶಪ್ಪವ ಹಾನಗಲ್ಲ ಸಿಪಿಐ ಶಿವಶಂಕರ ಮಾರ್ಗದರ್ಶನದಲ್ಲಿ ಆಡೂರು ಪಿಎಸ್‌ಐ ನೀಲಪ್ಪ ನರಲಾರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎನ್.ಕೆ.ನಿಂಗನಹಳ್ಳಿ, ಎ.ಎಸ್.ಐ.ಜೆ.ಸಿ.ರಾಠೋಡ, ಎಸ್.ಎಂ.ಕಂಬಳಿ, ಎಂ.ಎಂ.ಮಾದರ, ಎಸ್.ಜಿ.ಸೋಮಸಾಗರ ಸೇರಿದಂತೆ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿ ಹಾಗೂ ಮೊಬೈಲ್ ಜಪ್ತಿ ಮಾಡಿಕೊಳ್ಳವಲ್ಲಿ ಯಶಸ್ವಿಯಾಗಿದ್ದಾರೆ.

____

Share this News
error: Content is protected !!