July 25, 2021

31 ವರ್ಷ ಪ್ರಸಿದ್ದ ಮೈಲಾರದ ಕಾರ್ಣಿಕ ನುಡಿದಿದ್ದ ಮಾಲತೇಶಪ್ಪ ಗೊರವಯ್ಯ ನಿಧನ; ಶ್ರೀಮೈಲಾರಲಿಂಗೇಶ್ವರ ಆಡಳಿತ ಮಂಡಳಿ ಸಂತಾಪ.!

ಮೈಲಾರ- ಸುಮಾರು 31ವರ್ಷಗಳ ಕಾಲ ಪ್ರಸಿದ್ದ ಮೈಲಾರ ಕಾರ್ಣಿಕ ನುಡಿದಿದ್ದ, ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇಂದು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೊರವಯ್ಯ ಮಾಲತೇಶಪ್ಪ ಇಂದು ಬೆಳಿಗ್ಗೆ 5ಗಂಟೆಗೆ ನಿಧನರಾಗಿದ್ದಾರೆ.

ತಮ್ಮ ಕಂಚಿನ ಕಂಠದಿಂದ ಮೂರು ದಶಕಗಳಿಂದ ಪುರಾಣ ಪ್ರಸಿದ್ದ ಮೈಲಾರ ಕಾರಣೀಕವನ್ನು ಗೊರವಯ್ಯ ಮಾಲತೇಶಪ್ಪ ನುಡಿದಿದ್ದರು. ಇತ್ತಿಚಿಗೆ ಕಳೆದು ನಾಲ್ಕು ವರ್ಷಗಳಿಂದ ಆನಾರೋಗ್ಯದ ಕಾರಣ ಮೈಲಾರ ಕಾರಣೀಕವನ್ನು ಬೇರೊಬ್ಬ ಗೊರವಯ್ಯ ನುಡಿಯುತ್ತಿದ್ದಾರೆ.

ಗೊರವಯ್ಯ ಮಾಲತೇಶಪ್ಪ ಹಾಗೂ ಅವರ ಕುಟುಂಬ ಈ ನಡುವೆ ಬಹಳಷ್ಟು ಸಂಕಷ್ಟವನ್ನು ಎದುರಿಸಿದ್ದರು. ಇವರ ಸಂಕಷ್ಟಕ್ಕೆ ನಾಡಿನ ಭಕ್ತರು ಸಹಾಯ ಹಸ್ತಚಾಚಿದ್ದರು. ಭಕ್ತರ ಸಹಾಯದಿಂದ ಗೊರವಯ್ಯ ಹೊಸ ನಿರ್ಮಿಸಿಕೊಳ್ಳಲು ನೆರವಾಗಿತ್ತು. ಆದರೆ ಮನೆ ಪೂರ್ಣಗೊಳ್ಳುವ ಮೊದಲೇ ಮಾಲತೇಶಪ್ಪ ಇಹಲೋಕವನ್ನು ತೊರೆದಿದ್ದಾರೆ.

ನಿಧನರಾದ ಮಾಲತೇಶಪ್ಪನ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಪ್ರಾರ್ಥಿಸಿದ್ದಾರೆ.

Share this News
error: Content is protected !!