July 25, 2021

ಕೋವಿಡ್ ಸಂಕಷ್ಟ ಹಿನ್ನಲೆ : ಜಿಲ್ಲೆಯ 52,500 ಕಾರ್ಮಿಕರಿಗೆ ಆಹಾರ್ ಕಿಟ್ -ಡಿಸಿ ಸಂಜಯ್ ಶೆಟ್ಟೆಣ್ಣನವರ.

ಹಾವೇರಿ- ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದು, ಜಿಲ್ಲೆಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ 52,500 ಆಹಾರಧಾನ್ಯಗಳ ಕಿಟ್‍ಗಳ ವಿತರಣೆಗೆ ತಾಲೂಕಾವಾರು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.

ಹಾವೇರಿ, ಶಿಗ್ಗಾಂವ, ಹಾನಗಲ್, ರಾಣೇಬೆನ್ನೂರ ಹಾಗೂ ಸವಣೂರು ತಾಲೂಕಿಗೆ ತಲಾ 8000 ಸಾವಿರ, ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿಗೆ 8000 ಸಾವಿರ ಹಾಗೂ ಬ್ಯಾಡಗಿ ತಾಲೂಕಿಗೆ 4500 ಆಹಾರಧಾನ್ಯಗಳ ಕಿಟ್ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆಹಾರಧಾನ್ಯಗಳ ಕಿಟ್‍ಗಳನ್ನು ಆಯಾ ತಾಲೂಕಿನ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ಉಗ್ರಾಣಗಳಲ್ಲಿ ಸಂಗ್ರಹಿಸಿಟ್ಟುಕೊಂಡು, ತಮ್ಮ ಕಾರ್ಯವ್ಯಾಪ್ತಿಯ ಮತಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೆ ತಂದು ಕಾನೂನು ಸೇವಾ ಪ್ರಾಧಿಕಾರದವರ ಸಹಯೋಗದೊಂದಿಗೆ ತಾಲೂಕಾ ಕಾರ್ಮಿಕ ನಿರೀಕ್ಷಕರು ಮತ್ತು ಆಹಾರ ನಿರೀಕ್ಷಕರ ನೆರವಿನೊಂದಿಗೆ ಪಾರದರ್ಶಕವಾಗಿ ಆಹಾರ ಕಿಟ್‍ಗಳನ್ನು ಹಂಚಿಕೆ ಮಾಡಲು ತಹಶೀಲ್ದಾರಗಳಿಗೆ ನಿರ್ದೇಶನ ನೀಡಿದ್ದಾರೆ.

Share this News
error: Content is protected !!