June 22, 2021

HAVERI | ನಾಳೆ ಅಗಡಿಯಲ್ಲಿ ಮೊದಲ ಬಾರಿಗೆ ಮುಕ್ತ ಯೋಗ ಶಿಬಿರ

ಹಾವೇರಿ- ಅಗಡಿಯಲ್ಲಿ ಮೊಟ್ಟಮೊದಲ ಬಾರಿಗೆ ಮುಕ್ತ ಯೋಗ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ದಲ್ಲಿ ಸಾರ್ವಜನಿಕರು ‌ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳಲಾಗಿದೆ.

ಮುಖ್ಯ ತರಬೇತಿದಾರರು ಗಣೇಶ್ ಹಿಂಡಿ ಹಾಗೂ ಅಚೀವರ್ಸ್ ಆರ್ಮಿ ಕೋಚಿಂಗ್ ಅಕಾಡೆಮಿ ತರಬೇತುದಾರರಾದ ಇಮ್ತಿಯಾಜ್ ಹಾವನೂರ್ ಹಾಗೂ ಸುಭಾಷ್ ಚಂದ್ರ ಪಟ್ಟಣಶೆಟ್ಟಿ (ಮಾಜಿ ಯೋಧರು ) ಇವರ ಉಪಸ್ಥಿತಿಯಲ್ಲಿ ಯೋಗ ಶಿಬಿರ ನಡೆಯಲಿದೆ.

ನಾಳೆ ದಿನಾಂಕ 14-02-2021 ಬೆಳಿಗ್ಗೆ 6.00 ಗಂಟೆಗೆ ಯೋಗ ಶಿಬಿರ‌ ಪ್ರಾರಂಭವಾಗಲಿದ್ದು,  ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಯೋಗ ಶಿಬಿರ ಜರಗಲಿದೆ.

ವಿಶೇಷ ಸೂಚನೆ:- ಯೋಗ ಶಿಬಿರಕ್ಕೆ ಆಗಮಿಸುವ ಎಲ್ಲ ಶಿಬಿರಾರ್ಥಿಗಳು ಟವಲ್ ಅಥವಾ ಶಾಲು ಜೊತೆಗೆ ತರಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

Share this News
error: Content is protected !!