July 25, 2021

1 ಕೋಟಿ ರೂ ವೆಚ್ಚದ ರಸ್ತೆ ಕಳಪೆ; ನಡು ರೋಡಿನಲ್ಲಿ ಗುತ್ತಿಗೆದಾರನ ಮುಖವಾಡ ಬಯಲು ಮಾಡಿದ ಗ್ರಾಮಸ್ಥರು.!

ಹಾವೇರಿ-ಲಾಕಡೌನ್ ಇರುವುದನ್ನೆ ಬಂಡವಾಳ ಮಾಡಿಕೊಂಡು ರಸ್ತೆಯ ಕೆಲಸವನ್ನು ಕಳಪೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಾವೇರಿ ತಾಲೂಕಿನ ಯಲಗಚ್ಚು ಹಾಗೂ ಹೊಸರಿತ್ತಿಗೆ ಹೋಗುವ ರಸ್ತೆಯನ್ನು ಸಂಪೂರ್ಣ ಕಳಪೆ ಮಾಡಿದ್ದಾರೆಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ಅದು ಸಾಕ್ಷಿ ಸಮೇತ ಡಾಂಬರ್ ಹಾಕಿದ ರೋಡನ್ನು ಕೈಯಿಂದ ಕಿತ್ತು ಕಿತ್ತು ತೋರಿಸುವ ಮೂಲಕ ಗುತ್ತಿಗೆದಾರನ ಮುಖವಾಡವನ್ನು ಗ್ರಾಮಸ್ಥರು ಕಳಚಿದ್ದಾರೆ. ಆರು ಕಿಮೀ ಇರುವ ಈ ದಾರಿಯು ಇದಾಗಿದ್ದು, ಐ ಡಿ ಲಮಾಣಿ ಎಂಬ ಗುತ್ತಿಗೆದಾರರಿಗೆ ಟೆಂಡರ್ ಆಗಿತ್ತು.

ಜಿಲ್ಲಾ ಪಂಚಾಯತ ಅನುದಾನದಡಿ 1 ಕೋಟಿ ರೂ ವೆಚ್ಚದಲ್ಲಿ ಮಾಡಿದ ರಸ್ತೆ ಕಾಮಗಾರಿ ಇದಾಗಿದೆ. ಇಂದು ಗುತ್ತಿಗೆದಾರ ಈರಪ್ಪ ಲಮಾಣಿ ಎಂಬುವವರ ಎದುರಿಗೆ ರಸ್ತೆಯ ಡಾಂಬರ್ ಕಿತ್ತು ತೋರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಕಡೌನ್ ವೇಳೆ ಜನರು ಯಾರು ಹೊರಗೆ ಹೆಚ್ಚು ಬರುವುದಿಲ್ಲ. ಹೀಗಾಗಿ ಬೇಕಾಬಿಟ್ಟಿಯಾಗಿ ವರ್ಕ್ ಮಾಡಿ ಬಿಲ್ ತೆಗೆಸಿಕೊಂಡಿದ್ದಾರೆ.

ಇನ್ನೂ ಗುತ್ತಿಗೆದಾರನು ಮಾಜಿ ಸಚಿವ ರುದ್ರಪ್ಪ ಲಮಾಣಿಯ ಸಂಬಂಧಿಕ ಎನ್ನಲಾಗಿದೆ. ಈ ಕಾಮಗಾರಿ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನರು ಈ ವೇಳೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

Share this News
error: Content is protected !!