July 25, 2021

ಅಲೆಮಾರಿ ಮಕ್ಕಳ ಗೋಳು; ಆನ್ಲೈನ್ ಕ್ಲಾಸ್ ಸ್ಟಾರ್ಟ್ ಆಗೈತಿ ರೀ, ನಮ್ಮ ಕಡೆ ಪೋನ್ ಇಲ್ಲ. ನಾವ್ ಹೆಂಗ್ ಓದಬೇಕ್ರಿ.!?

ಹಾವೇರಿ – ಕೊರೋನಾ ಅಲೆ ಅಬ್ಬರಕ್ಕೆ ಶಾಲಾ ಕಾಲೇಜು ಸಂಪೂರ್ಣ ಬಂದ್ ಆಗಿವೆ. ಈಗ ಆನ್ ಲೈನ್ ತರಗತಿಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಶಾಲೆಯ ಮಕ್ಕಳ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ಹಾವೇರಿ ನಗರದ ಹೊರವಲಯದಲ್ಲಿರುವ ಅಲೆಮಾರಿ ಜನಾಗದ ನಿವಾಸಿಗಳಿಗೆ ಸ್ವಂತ ಮನೆ ಇಲ್ಲ ಅತ್ತ ಈಗ ಶಾಲೆಯೂ ಇಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯುತ್ ಇಲ್ಲ.
ನಾವು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಎಲ್ಲ ಚೊಲೋ ಅಂಕ ತಗೊಂಡವ್ರಿ, ಈಗ ಆನ್ ಲೈನ್ ಕ್ಲಾಸ್ ಪ್ರಾರಂಭವಾಗುತ್ತಿವೆ. ನಮಗೆ ಮೊಬೈಲ್ ಇಲ್ಲ ಎಂದು ಉತ್ತಮ ಅಂಕ ಪಡೆದು ಮೂರಾರ್ಜಿ ದೇಶಾಯಿ ಶಾಲೆಗೆ ಆಯ್ಕೆಯಾಗಿರುವ ಪ್ರತಿಭಾವಂತ ವಿಧ್ಯಾರ್ಥಿನಿ ಭವಾನಿ ಭರ್ಗಿ ಮತ್ತು ದುರ್ಗಮ್ಮ ಭರ್ಗಿ ಎಂಬ ಅಲೆಮಾರಿ ಮಕ್ಕಳು ತಮ್ಮ ನೋವುನ್ನು ಹೇಳಿಕೊಂಡಿವೆ.

ಸ್ಮಾಟ್ ಪೋನ್ ಇಲ್ಲ. ಆನ್ ಲೈನ್ ಕ್ಲಾಸ್ ಗೆ ನಾವು ಕುಳಿತುಕೊಳ್ಳಲು ಆಗುವುದಿಲ್ಲ. ಯಾರಾದರೂ ದಾನಿಗಳು ಅಥವಾ ಜಿಲ್ಲಾಡಳಿತವು ನಮಗೆ ಸ್ಮಾರ್ಟ್ ಪೋನ್ ಕೊಡಿಸುವಂತೆ ಇಬ್ಬರು ಬಾಲಕಿಯ ಮನವಿ ಮಾಡಿಕೊಂಡಿದ್ದಾರೆ.

Share this News
error: Content is protected !!