July 25, 2021

ಕರ್ಜಗಿ ಬಂಡಿ‌ ನಿಷೇಧ| ಹಾವೇರಿ ತಾಲೂಕಿನ ಕರಜಗಿ ಗ್ರಾಮದ ಪ್ರಸಿದ್ದ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ.!

ಹಾವೇರಿ- ತಾಲೂಕಿನ ಕರ್ಜಗಿ ಗ್ರಾಮದ ಐತಿಹಾಸಿಕ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆಯನ್ನು ನಿಷೇಧಿಸಿ ಹಾವೇರಿ ಜಿಲ್ಲಾಧಿಕಾರಿ ಶ್ರೀಯುತ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ಕೊವೀಡ್ -19 ಎರಡನೇ ಅಲೆ ಸಾಂಕ್ರಾಮಿಕ ರೋಗದ ನಿಯಂತ್ರಣದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖ ಇದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಗಳಿಂದ ಆದೇಶ ಹೊರಡಿಸಲಾಗಿದೆ.

ಇನ್ನು ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆಯೂ ಜೂನ್ 29 ರಿಂದ ಜುಲೈ 1ರವರೆಗೆ ನಡೆಯುತ್ತಿತ್ತು. ಈ ಆದೇಶದಿಂದ ರೈತರಿಗೆ ನಿರಾಸೆಯುಂಟಾಗಿದೆ. ಜಾತ್ರೆಯ ಮೂರನೇಯ ದಿನ ಎತ್ತುಗಳನ್ನು ಅಲಂಕಾರಗೊಳಸಿ ಬಹಳ ವಿಜೃಂಭಣೆಯಿಂದ ಬಂಡಿಗೆ ಕಟ್ಟಿ ಓಡಿಸಲಾಗುತ್ತದೆ.

ಸುತ್ತಮುತ್ತಲಿನ ಹತ್ತಾರೂ ಹಳ್ಳಿಗಳಿಂದ ಸಾವಿರಾರು ರೈತ ಬಾಂಧವರು ಸೇರುವುದರಿಂದ ಕೋವಿಡ್ ಮಾರ್ಗಸೂಚಿ ಅನುಸಾರ ಹಾವೇರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣವ ರ ಆದೇಶ ಹೊರಡಿಸಿದ್ದಾರೆ.

Share this News
error: Content is protected !!