July 25, 2021

ಡಾಕ್ಟರ್ ನಿರ್ಲಕ್ಷ್ಯದಿಂದ ರೋಗಿ ಸಾವು ಆರೋಪ; ಸಂಬಂಧಿಕರಿಂದ ವೈದ್ಯನ ಕಾರಿನ ಗಾಜು ಪುಡಿ ಪುಡಿ.!

ಹಾವೇರಿ – ಡಾಕ್ಟರ್ ನಿರ್ಲಕ್ಷ್ಯದಿಂದ ಎದೆನೋವು ಅಂತಾ ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಡಾಕ್ಟರ್ ಕಾರಿನ ಗಾಜು ಪುಡು ಪುಡಿ ಮಾಡಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಓಂ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಖಾಜಾಮೋದ್ದೀನ್ ಸಾಬ ಟಿನ್‌ಮೇಕರ್ 55 ವರ್ಷ ವಯಸ್ಸು ಎಂದು ಗುರುತಿಸಲಾಗಿದೆ.

ರಾಣೆಬೆನ್ನೂರು ನಗರದ ಓಂ ಆಸ್ಪತ್ರೆ ಮುಂದೆ ಈ ಘಟನೆ ನಡೆದಿದ್ದು, ಡಾ.ಸುನೀಲ ಎಂಬ ಬಿಎಎಂಎಸ್ ಡಾಕ್ಟರ್ ಗೆ ಸೇರಿದ ಕಾರಿನ ಗಾಜು ಪುಡಿ ಪುಡಿ ಮಾಡಿ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರುತಿನಗರದ ಬೆಂಚನಮರಡಿಯಲ್ಲಿ ಡಾ.ಸುನೀಲ ಆಸ್ಪತ್ರೆ ಇದೆ. ರೋಗಿ ಖಾಜಾಮೋದ್ದೀನ್ ಸಾಬ ಮೃತಪಡ್ತಿದ್ದಂತೆ ತನ್ನದೆ ಕಾರಿನಲ್ಲಿ ಹೆಚ್ಚಿನ ಚಿಕಿತ್ಸೆಗೆ ಅಂತಾ ಓಂ ಆಸ್ಪತ್ರೆಗೆ ಕರೆತಂದಿದ್ದಾನೆ.

ಓಂ ಆಸ್ಪತ್ರೆಯವರು ಖಾಜಾಮೋದ್ದೀನ್ ಸಾಬ ಮೃತಪಟ್ಟಿದ್ದಾನೆ ಅಂತಾ ಖಚಿತ ಮಾಡ್ತಿದ್ದಂತೆ ಮೃತನ ಸಂಬಂಧಿಕರು ಡಾಕ್ಟರ್ ನಿರ್ಲಕ್ಷ್ಯ ದಿಂದ ರೋಗಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿ, ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಡಾ.ಸುನೀಲಗೆ ಸೇರಿದ ಕಾರು ಬಹುತೇಕ ಜಖಂ ಆಗಿದೆ. ಓಂ ಆಸ್ಪತ್ರೆ ಮುಂದೆ ಮೃತನ ಸಂಬಂಧಿಕರು ಜಮಾವಣೆಗೊಂಡಿದ್ದಾರೆ. ಸ್ಥಳಕ್ಕೆ ರಾಣೆಬೆನ್ನೂರು ನಗರಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ರಾಣೆಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 

_____

Share this News
error: Content is protected !!