June 22, 2021

ಸಹೋದರನ ಲಗ್ನಪತ್ರಿಕೆ ಕೊಡಲು ಹೋದ ಅಣ್ಣ ಬೈಕ್ ನಿಂದ ಬಿದ್ದು ಸಾವು.

ಹಾವೇರಿ- ಬೈಕ್‌ನಿಂದ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಪುರದಕೇರಿ ಗ್ರಾಮದ ಬಳಿ ನಡೆದಿದೆ. ಮೃತನನ್ನು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೀಟೂರು ಗ್ರಾಮದ 35 ವರ್ಷ ವಯಸ್ಸಿನ ಸುರೇಶ ಹರಿಹರದ ಅಂತಾ ಗುರ್ತಿಸಲಾಗಿದೆ.

ಸಹೋದರನ ಮದುವೆಯ ಹಿನ್ನೆಲೆಯಲ್ಲಿ ಕಮಲಾಪುರ ಗ್ರಾಮಕ್ಕೆ ಲಗ್ನಪತ್ರಿಕೆ ವಿತರಿಸಲು ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ರಟ್ಟೀಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

_____

Share this News
error: Content is protected !!