July 25, 2021

ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ; ಹಾವೇರಿ ಎಸ್ಪಿ ಹನಮಂತರಾಯರವರ ನೇತೃತ್ವದಲ್ಲಿ 200 ಕೆ.ಜಿ ಗಾಂಜಾ ನಾಶ.!

ಹಾವೇರಿ- ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶ ಪಡಿಸಿಕೊಳ್ಳಲಾಗಿದ್ದ ಸುಮಾರು 200 ಕೆಜಿ ಯಷ್ಟು ಮಾದಕ ವಸ್ತುಗಳನ್ನು ಇಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ನಾಶ ಮಾಡಲಾಯಿತು.

ಹಾವೇರಿ ಜಿಲ್ಲೆಯಲ್ಲಿ 20 ಪ್ರಕರಣಗಳಲ್ಲಿ ಸುಮಾರು 200 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಮಾದಕ ವಸ್ತುಗಳ ವಿಲೇವಾರಿ ಸಮಿತಿ ಸಮ್ಮುಖದಲ್ಲಿ ಇಂದು ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಕೇಂದ್ರದಲ್ಲಿ ನಾಶಪಡಿಸಲಾಯಿತು‌.

ಹಾವೇರಿಯ ಎಸ್ಪಿ ಹನುಮಂತರಾಯ ರವರ ನೇತ್ರತ್ವದಲ್ಲಿ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ವಸ್ತುಗಳನ್ನು ನಾಶಪಡಿಸಲಾಯಿತು.

Share this News
error: Content is protected !!