July 25, 2021

ACCIDENT| ಕುಡಿದ ನಶೆಯಲ್ಲಿ ಮಾಜಿ ಸಚಿವರ ಪುತ್ರನಿಂದ ಕಾರು ಚಾಲನೆ; ಬೈಕ್ ಸವಾರನಿಗೆ ಗಂಭೀರ ಗಾಯ.!

ಹುಬ್ಬಳ್ಳಿ. – ಹಾವೇರಿ ಜಿಲ್ಲೆ ಹಾನಗಲ್‌ ಕ್ಷೇತ್ರದ ಮಾಜಿ‌ ಸಚಿವ ಮನೋಹರ ತಹಶಿಲ್ದಾರರ ಪುತ್ರ ಕುಡಿದ ನಶೆಯಲ್ಲಿ ಕಾರು ಚಾಲನೆ ಮಾಡುವ ವೇಳೆ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರವಾದ ಗಾಯಗಳಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ತೋಳನಕರೆಯ ಬಳಿ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡುತ್ತಿದ್ದ ಹಾನಗಲ್ ಕ್ಷೇತ್ರದ ಮಾಜಿ ಸಚಿವರಾದ ಮನೋಹರ್ ತಹಶಿಲ್ದಾರರ ಪುತ್ರ ವೆಂಕಟೇಶರ ಕಾರ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಾಜಿ‌ ಸಚಿವರ ಪುತ್ರ ವೆಂಕಟೇಶ ಕುಡಿದ ನಶೆಯಲ್ಲಿ ಕಾರು ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಘಟನೆಯಲ್ಲಿ ಬೈಕ್ ಸವಾರನು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ
ಪಾರಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಮಾಜಿ ಸಚಿವರ ಪುತ್ರ ವೆಂಕಟೇಶ ಕಾರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.

Share this News
error: Content is protected !!