July 25, 2021

ಸಿಗಂದೂರಿನಲ್ಲಿ ಹೀರೆಕೆರೂರಿನ ಮಹಿಳೆ ಆತ್ಮಹತ್ಯೆಗೆ ಯತ್ನ; ಅಂಬ್ಯುಲೆನ್ಸ್ ಚಾಲಕರಿಂದ ಮಹಿಳೆ ರಕ್ಷಣೆ.!

ಮಹಿಳೆಯೋರ್ವಳು ಶರಾವತಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ಮಾಡಿದ್ದು ಅವರನ್ನು ಅಂಬ್ಯುಲೆನ್ಸ್ ಚಾಲಕರು ರಕ್ಷಣೆ ಮಾಡಿದ್ದಾರೆ.

ಶಿಫ್ಟ್ ಕಾರಿನಲ್ಲಿ ಏಕಾಂಗಿಯಾಗಿ ಸಿಗಂದೂರಿಗೆ ಬಂದಿದ್ದ ರೇಣುಕಮ್ಮ ಎಂಬ 48 ವರ್ಷದ ಮಹಿಳೆ ದೇವಿ ದರ್ಶನ ಪಡೆದು ವಾಪಾಸ್ ಕಳಸವಳ್ಳಿಯ ಕಡೆ ಲಾಂಚ್ ನಲ್ಲಿ ವಾಪಾಸಾಗುತ್ತಿದ್ದ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ನೀರಿಗೆ ಧುಮುಕಿದ್ದಾಳೆ.

ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕೌಟುಂಬಿಕ ಕಲಹವೆಂದು ಹೇಳಲಾಗುತ್ತಿದೆ. ಲಾಂಚ್ ನಲ್ಲಿದ್ದ ಅಂಬ್ಯುಲೆನ್ಸ್ ಚಾಲಕರೋರ್ವರ ಸಾಹಸದಿಂದಾಗಿ ಮಹಿಳೆ ಬದುಕುಳಿದಿದ್ದಾಳೆ.

ಮಹಿಳೆಯನ್ನ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಪ್ರಾಣಾಪಾಯದಿಂದ ರೇಣುಕಮ್ಮ ಬಜಾವ್ ಆಗಿದ್ದಾರೆ. ಇವರು ಹಿರೇಕೆರೂರು ತಾಲೂಕಿನ ಕರೂರು ಗ್ರಾಮದ ವಾಸಿ ಎಂದು ತಿಳಿದು ಬಂದಿದೆ.

Share this News
error: Content is protected !!