ಹಾವೇರಿ-ಹಾವೇರಿ ತಾಲ್ಲೂಕು ಕೆರಿಮತ್ತಿಹಳ್ಳಿ ಗ್ರಾಮದ ಬಳಿ ಇರುವ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ಒತ್ತಾಯಿಸಿ ಎಸ್.ಎಫ್.ಐ ಸಂಘಟನೆ ಸ್ನಾತಕೋತ್ತರ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ಸ್ನಾತಕೋತ್ತರ ಕೇಂದ್ರದಲ್ಲಿ ಮುಖ್ಯವಾಗಿ ಬಸ್ ನಿಲ್ದಾಣ ನಿರ್ಮಾಣ, ಹಾವೇರಿ ನಗರದಿಂದ ಪಿ.ಜಿ.ಸೆಂಟರ್ ಗೆ ವಿದ್ಯಾರ್ಥಿಗಳ ಅನುಕೂಲ ತಕ್ಕಂತೆ ಹೆಚ್ಚುವರಿ ಬಸ್ ಗಳನ್ನು ಬಿಡಬೇಕು. ಸ್ನಾತಕೋತ್ತರ ಕೇಂದ್ರದ ಕ್ಯಾಂಪಸ್ ನಲ್ಲಿ ಸಮಾಜ ಕಲ್ಯಾಣ ಇಲಾಖೆತಯ ವಸತಿ ನಿಲಯವನ್ನು ಮಂಜೂರಮಾಡಬೇಕು. ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಶೀಘ್ರವಾಗಿ ಪ್ರಾರಂಭಿಸಬೇಕು.
ಸ್ನಾತಕೋತ್ತರ ಕೇಂದ್ರದ ಕ್ಯಾಂಪಸ್ ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಮಂಜೂರಮಾಡಬೇಕು.ಪ್ರಸ್ತುತ ಹಾಸ್ಟೆಲ್ ನ ಸುತ್ತ ತಡೆಗೊಡೆ ನಿರ್ಮಾಣ ಮಾಡಬೇಕು ಹಾಗೂ ಸೂಕ್ತ ಭದ್ರತೆ ನೀಡಬೇಕು ಮತ್ತು ಮುಲಭೂತ ಸೌಲಭ್ಯ ಒದಗಿಸಬೇಕು.
ಸ್ನಾತಕೋತ್ತರ ಕೇಂದ್ರಕ್ಕೆ ವಿಭಾಗವಾರು ಕಾಯಂ ಉಪನ್ಯಾಸಕರ ನೇಮಕ ಮಾಡಬೇಕು.ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಬೇಕಾದ ಸ್ಟೈಫಂಡ್ ಸರಿಯಾದ ಸಮಯಕ್ಕೆ ತಲುಪ್ಪಿಸಬೇಕು.ಎಲ್ಲಾ ವಿದ್ಯಾರ್ಥಿಗಳಿಗೂ ಲ್ಯಾಪಟಾಪ್ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಬೇಕು.ಸೇರಿದಂತೆ ವಿವಿಧ ಭೇಡಿಕೆ ಈಡೇರಿಸುವಂತೆ ವಿಶ್ವವಿದ್ಯಾಲಯದ ಪ್ರಭಾರಿ ಅಧಿಕಾರಿಗಳಾದ ಶ್ರೀ ಎಚ್.ವೈ. ಪ್ರಶಾಂತ್ ಅವರ ಮೂಲಕ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೂ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ಭೋವಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ , ಎಸ್ಎಫ್ಐ ಮುಖಂಡರಾದ ಮಾಹತೇಶ್ ಪುರದ, ಗೀರಿಶ್ ಗೊರವರ, ಮಹೇಶ್ ಬಾಲಣ್ಣನವರ, ಮಂಜುನಾಥ ಹೊಸಹಳ್ಳಿ, ರವಿ ಎಸ್ ಎಸ್ , ಸಂತೋಷ ಲಮಾಣಿ, ಹಾಗೂ ವಿದ್ಯಾರ್ಥಿಗಳಾದ ರವಿ ಬಂಡಿವಡ್ಡರ, ಅಶೋಕ ಆರ್ ದ್ಯಾಮಣ್ಣನವರ, ಮಹೇಶ್ ಅಕಾರಿ, ಮಂಜುನಾಥ ಓಲೇಕಾರ, ಅಪ್ಪಾಜಿ ಗೌಡ, ಮಂಜುನಾಥ ಜೆ ಕೆ, ಅಶ್ವಿನಿ,ಸಂಗೀತಾ ಬಿ, ನಾಗರತ್ನ ಎನ್, ವಿದ್ಯಾ ನೆಸರಗಿ,ಶ್ವೇತಾ ಬಡಿಗೇರ್, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
More Stories
ಚಿತ್ರಕಲೆ ಒಂದು ವಿಶ್ವ ಭಾಷೆಯಾಗಿದೆ- ವೀರೇಶ ಹನಗೋಡಿಮಠ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಹಾವೇರಿ ಸೈಕ್ಲಿಂಗ್ ಕ್ಲಬ್ ವತಿಯಿಂದ ವಿಶೇಷವಾಗಿ ಆಚರಣೆ
ಭಗವಂತನನ್ನು ಸಾಕ್ಷತ್ಕಾರ ಮಾಡಿಕೊಳ್ಳವ ಸಾಧನವೇ ಲಿಂಗದೀಕ್ಷೆ – ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ