July 25, 2021

COVID VACCINATION| ಲಸಿಕಾಭಿಯಾನದಲ್ಲಿ ಹಿಂದುಳಿದ ಹಾವೇರಿ ಜಿಲ್ಲೆ; ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿ ಏಲಕ್ಕಿ ನಾಡು.!

ಬೆಂಗಳೂರು- ದೇಶಾದ್ಯಂತ ಜನವರಿ 16 ರಿಂದ ಆರಂಭವಾಗಿದ್ದ ಕೋವಿಡ್ ಲಸಿಕಾ ಅಭಿಯಾನದಲ್ಲಿ ರಾಜ್ಯದ ಹಲವು ಜಿಲ್ಲೆಗಳು ಶೇ. 40 ರಷ್ಟು ಕೂಡ ಸಾಧಿಸಿಲ್ಲ. ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ ರಾಜ್ಯದಲ್ಲಿಯೇ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ, ಹಾವೇರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಮಾತ್ರ ಶೇ. 50ರಷ್ಟು ಲಸಿಕಾ ಅಭಿಯಾನ ಪೂರೈಕೆ ಮಾಡಿದೆ. ಉಳಿದಂತೆ ಹಲವು ಜಿಲ್ಲೆಗಳು ಶೇ. 20-30% ರ ಅಸುಪಾಸಿನಲ್ಲಿವೆ. ಇದರಲ್ಲಿ ಹಾವೇರಿ ಜಿಲ್ಲೆಯೂ ಸೇರಿಕೊಂಡಿದ್ದು, ಶೇ. 18.14% ರಷ್ಟು ಲಸಿಕಾಭಿಯಾನ ಹೊಂದುವ ಮೂಲಕ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದೆ.

ಮೊದಲ ಡೋಸ್ ಪಡೆದವರು-

18-44 ವರ್ಷ ವಯಸ್ಸಿನವರು- 52,06,190
45 ವರ್ಷ ಮೇಲ್ಪಟ್ಟವರು- 1,06,11,739
ಒಟ್ಟು – 1,73,63,581

 

ಎರಡನೇ ಡೋಸ್ ಪಡೆದವರು-

18-44 ವರ್ಷ ವಯಸ್ಸಿನವರು- 45,688

45 ವರ್ಷ ಮೇಲ್ಪಟ್ಟವರು- 26,25,343

ಒಟ್ಟು- 34,08,896

ರಾಜ್ಯದಲ್ಲಿ ಒಟ್ಟಾರೆ ಈ ತನಕ 2,07,72,477 ಜನರಿಗೆ ಲಸಿಕೆಯನ್ನ ಹಾಕಲಾಗಿದೆ. ಇದರಲ್ಲಿ ಮೊದಲ ಡೋಸ್ ಲಸಿಕೆಯನ್ನು 1,73,63,581 ಮಂದಿ ಪಡೆದಿದ್ದು, ಎರಡನೇ ಡೋಸ್ ಅನ್ನು 34,08,896 ಮಂದಿ ಪಡೆದಿದ್ದಾರೆ.

ಶೇ. 30% ಕ್ಕಿಂತ ಹೆಚ್ಚು ಲಸಿಕಾಭಿಯಾನ ಪೂರೈಸಿದ ಜಿಲ್ಲೆಗಳು ಇಲ್ಲಿವೆ:

01) ಬೆಂಗಳೂರು- 57.59%

02) ಉಡುಪಿ – 42.91%.

03) ರಾಮನಗರ- 40.12%.

04) ಮೈಸೂರು- 39.31%.

05) ಕೋಲಾರ- 38.59%.

06) ಕೊಡಗು- 37.97%.

07) ದಕ್ಷಿಣ ಕನ್ನಡ- 35.36%

08) ಬೆಂಗಳೂರು ಗ್ರಾಮಾಂತರ- 35.09%.

09) ಉತ್ತರ ಕನ್ನಡ- 34.53%.

10) ಮಂಡ್ಯ- 33.92%.

11) ಚಿಕ್ಕಬಳ್ಳಾಪುರ- 33.86%.

12) ಹಾಸನ – 33.03%.

13) ಚಿಕ್ಕಮಗಳೂರು – 32.41%.

14) ಉಡುಪಿ- 31.11%.

ಶೇ.30% ರಷ್ಟು ಲಸಿಕಾಭಿಯಾನ ದಾಟದ ಜಿಲ್ಲೆಗಳು ಇಲ್ಲಿವೆ:

15) ಚಿತ್ರದುರ್ಗ – 30.55%.

16) ಶಿವಮೊಗ್ಗ- 30.53%.

17) ಗದಗ- 29.94%.

18) ಚಾಮರಾಜನಗರ-29.70%

19) ಕೊಪ್ಪಳ- 28.91%.

20) ಬಳ್ಳಾರಿ- 27.96%.

21) ಧಾರವಾಡ- 27.94%

22) ಬಾಗಲಕೋಟೆ-27.42%

23) ಬೀದರ್ – 27.18%.

24) ದಾವಣಗೆರೆ- 24.70%.

25) ಯಾದಗಿರಿ- 24.12%.

26) ರಾಯಚೂರು-23.36%.

27) ಬೆಳಗಾವಿ – 22.93%.

28) ವಿಜಯಪುರ- 22.88%.

29) ಕಲಬುರಗಿ- 18.31%.

30) ಹಾವೇರಿ- 18.14%.

_______________

Share this News
error: Content is protected !!