July 25, 2021

COVID VACCINE| ಲಸಿಕೆಗಾಗಿ ಹಾವೇರಿ ನಗರ ಜನತೆ ಪರದಾಟ; ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಹಿಡಿಶಾಪ.!

ಹಾವೇರಿ: ಕೋವಿಡ್ ಲಸಿಕೆಗಾಗಿ ನಗರ ಜನರು ದಿನನಿತ್ಯ ಪರದಾಡುತ್ತಿದ್ದಾರೆ. ಹಾವೇರಿ ನಗರದಲ್ಲಿ ಕೇವಲ ಒಂದೇ ಸ್ಥಳದಲ್ಲಿ ಲಸಿಕೆಯನ್ನು ಹಾಕುತ್ತಿದ್ದಾರೆ. ಇದರಿಂದ ಜನರು ಕಷ್ಟ ಅನುಭವಿಸುವಂತಾಗಿದೆ. ಲಸಿಕೆ ಸಿಗದೆ ಪರದಾಡುತ್ತಿದ್ದಾರೆ.

ಮಾನ್ಯ ಹಾವೇರಿ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾವೇರಿ ನಗರದಲ್ಲಿ ಕನಿಷ್ಠ 5 ರಿಂದ 6 ಕಡೆ ಲಸಿಕಾ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಲಸಿಕೆಯನ್ನು ನೀಡಲು ವ್ಯವಸ್ಥೆ ಮಾಡಬೇಕಾಗಿದೆ.
ಪ್ರತಿ ದಿನ ಎಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ನೀಡಲಾಗುತ್ತದೆ ಎಂಬುದು ಸರಿಯಾದ ಮಾಹಿತಿ ಇಲ್ಲ. ಪ್ರತಿ ದಿನ ವ್ಯಾಕ್ಸಿನ್ ಹಾಕುವ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಬೇಕು. ಇದರಿಂದಾಗಿ ಸಾರ್ವಜನಿಕರು ನಿತ್ಯ ತಮ್ಮ ಕೆಲಸಗಳನ್ನು ಬಿಟ್ಟು ಲಸಿಕೆಗಾಗಿ ಪರದಾಡಡುತ್ತಿರುವುದು ತಪ್ಪುತ್ತದೆ.

ಸರ್ಕಾರ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಲಸಿಕೆಯನ್ನು ಹಾಕಿಸಿಕೊಳ್ಳುವುದು ಕಡ್ಡಾಯ ಮಾಡಿದೆ. ಪರೀಕ್ಷಾರ್ಥಿಗಳು ಲಸಿಕೆ ಇಲ್ಲದೆ ಪರದಾಡುತ್ತಿರುವ ಪರಿಸ್ಥಿತಿ ಹಾವೇರಿಯಲ್ಲಿ ನಿರ್ಮಾಣವಾಗಿದೆ. ಈಗಾಗಲೇ ಒಂದನೇ ಡೋಸ್ ಲಸಿಕೆಯನ್ನು ಪಡೆದ ಸಾರ್ವಜನಿಕರು ಎರಡನೇ ಡೋಸ್ ಲಸಿಕೆಗಾಗಿ ದಿನನಿತ್ಯ ಅಲೆದಾಡುತ್ತಿದ್ದಾರೆ. ಕೂಡಲೇ ಶಾಸಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಮಸ್ಯೆ ಪರಿಹರಿಸಬೇಕಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹಾವೇರಿ ನಗರಕ್ಕೆ ಲಸಿಕೆಯನ್ನು ತರಿಸಿಕೊಂಡು, ಲಸಿಕೆಯನ್ನು ನೀಡಲು ವ್ಯವಸ್ಥೆ ಮಾಡಬೇಕೆಂದು‌ ನಗರದ ಜನತೆ ಆಗ್ರಹಿಸಿದ್ದಾರೆ.

Share this News
error: Content is protected !!