July 25, 2021

SSLC EXAM| ಶಿಕ್ಷಣ ಸಚಿವರಿಂದ SSLC ಪರೀಕ್ಷಾ ದಿನಾಂಕ ಘೋಷಣೆ; ಜುಲೈ 19 ಮತ್ತು ಜುಲೈ 22 ರಂದು ಎರಡು ದಿನ ಪರೀಕ್ಷೆ.!

ಬೆಂಗಳೂರು: ಜುಲೈ 19 ಮತ್ತು ಜುಲೈ 22 ರಂದು ಎರಡು ದಿನಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು ನಡೆದ ಸುದ್ದಿ ಗೋಷ್ಠಿ ಯಲ್ಲಿ ಘೋಷಿಸಿದ್ದಾರೆ.

ಶಿಕ್ಷಣ ಸಚಿವರ ಸುದ್ದಿಗೋಷ್ಠಿಯ ಮುಖ್ಯಾಂಶಗಳು

* ಜುಲೈ 19, ಮತ್ತು 22ರಂದು ಎರಡು ದಿನ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯುತ್ತದೆ.

* SSLC ಪರೀಕ್ಷೆಗೆ ಒಟ್ಟು 8,76,581 ವಿದ್ಯಾರ್ಥಿಗಳು.

* 73,066 ಪರೀಕ್ಷಾ ಕೇಂದ್ರಗಳಿರುತ್ತವೆ.

* ಕಳೆದ ಬಾರಿ 48 ಪರೀಕ್ಷಾ ಕೇಂದ್ರಗಳಿದ್ದವು.

* ಕೋವಿಡ್ ಹಿನ್ನೆಲೆ ಪರೀಕ್ಷಾ ಕೇಂದ್ರಗಳು ಹೆಚ್ಚಳ ಮಾಡಲಾಗಿದೆ.

* ಸರ್ಕಾರದ ಮಾರ್ಗಸೂಚಿ ಅನ್ವಯ ಪರೀಕ್ಷೆಗೆ ಸಿದ್ಧತೆ.

* ಎಲ್ಲಾ ಜಿಲ್ಲೆಗಳ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ.

* ವಿಡಿಯೋ ಕಾನ್ಸರೆನ್ಸ್ ಮೂಲಕ ಸಭೆ ನಡೆಸಲಾಗಿದೆ

* 2 ದಿನ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ

* ಜುಲೈ 19ರಂದು ಕೋರ್ ವಿಷಯಗಳ ಪರೀಕ್ಷೆ ನಡೆಯುತ್ತದೆ.

* ಜುಲೈ 19ರಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ

* ಜುಲೈ 22ರಂದು ಭಾಷಾ ವಿಷಯಗಳ ಪರೀಕ್ಷೆ.

*ಬೆಳಿಗ್ಗೆ10.30 ರಿಂದ 1.30 ರವರೆಗೆ ಪರೀಕ್ಷೆ.

* ಬುದವಾರವೇ ಹಾಲ್ ಟಿಕೆಟ್ ಬಿಡುಗಡೆಯಾಗುತ್ತದೆ.

* ಈ ಬಾರಿ 2 ದಿನ SSLC ಪರೀಕ್ಷೆಗಳು ನಡೆಯುತ್ತವೆ.

* 1ನೇ ದಿನ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ

* ಮೊದಲ 1 ದಿನ ಕೋರ್ ವಿಷಯಗಳಿಗೆ ಪರೀಕ್ಷೆ.

* 2ನೇ ದಿನ ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯುತ್ತದೆ

* ಈ ಬಾರಿ ಎರಡು ದಿನ ಪರೀಕ್ಷೆ ನಡೆಯಲಿದೆ.

* ಬಹುಆಯ್ಕೆಯ ವಿಧಾನ ಪ್ರಶ್ನೆಪತ್ರಿಕೆ ಇರಲಿದೆ.

* ಒಂದು ಡೆಸ್ಕ್‌ನಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ ನೀಡಲಾಗಿದೆ.

*ಕೊಠಡಿಯಲ್ಲಿ 12 ಮಂದಿಗೆ ಮಾತ್ರ ಅವಕಾಶ ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕರು ಬೆಳಿಗ್ಗೆ 8.30am ಗಂಟೆಗೆ
ಹಾಜರಾಗಿರುತ್ತಾರೆ.

* ಶಿಕ್ಷಕರಿಗೆ ಅನಾರೋಗ್ಯವಿದ್ದರೇ ಅಂತಹವರನ್ನು ಪರೀಕ್ಷಾ ಕರ್ತವ್ಯಕ್ಕೆ ತೆಗೆದುಕೊಳ್ಳೋದಿಲ್ಲ.

* ಮಕ್ಕಳಿಗೆ ಎರಡು ಬಾರಿ ಸ್ಯಾನಿಟೈಸ್ ಮಾಡಲಾಗುತ್ತದೆ.

* ಪರೀಕ್ಷೆ ಹಾಗೂ ಪ್ರಶ್ನೆ ಪತ್ರಿಕೆ ಸರಳವಾಗಿರುತ್ತದೆ.

* ಜೂನ್ 30ಕ್ಕೆ ಮಕ್ಕಳಿಗೆ ಹಾಲ್ ಟಿಕೆಟ್ ನೀಡಲಾಗುತ್ತದೆ

* ಕೊರೊನಾ ಲಕ್ಷಣಗಳಿರುವ ಮಕ್ಕಳಿಗೆ ಕೊರೊನಾ ಕೇರ್ ಸೆಂಟರ್‌ನಲ್ಲೇ ಪರೀಕ್ಷೆ ಮಾಡಲಾಗುತ್ತದೆ.

* ಕೊಠಡಿಯ ಮೇಲ್ವಿಚಾರಕರು ಕಡ್ಡಾಯವಾಗಿ ಲಸಿಕೆ ಪಡೆದಿರಲೇಬೇಕು.

* ಎಲ್ಲಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ ನಿಗಾ ವಹಿಸುತ್ತಾರೆ

Share this News
error: Content is protected !!