July 25, 2021

CRIME NEWS| ಮೆಡಿಕಲ್ ಶಾಪ್ ಸೇರಿದಂತೆ 8 ಅಂಗಡಿಗಳಲ್ಲಿ ಸರಣಿ ಕಳ್ಳತನ; ಸಿಸಿ ಕ್ಯಾಮರಾದಲ್ಲಿ ಕಳ್ಳರ ಸೆರೆ.!

ಹಾವೇರಿ- ಎಂಟು ಅಂಗಡಿಗಳಲ್ಲಿ ಸರಣಿ ಕಳ್ಳತನವಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಮತ್ತು ಹಾನಗಲ್ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ನಾಲ್ಕು ಮೆಡಿಕಲ್ ಶಾಪಗಳು, ಒಂದು ಕಿರಾಣಿ ಮತ್ತು ತರಕಾರಿ ಅಂಗಡಿ ಸೇರಿದಂತೆ ಒಟ್ಟು ಎಂಟು ಅಂಗಡಿಗಳಿಗೆ ಖದೀಮರು ಕನ್ನ ಹಾಕಿದ್ದಾರೆ.

ನಾಲ್ಕು ಅಂಗಡಿಗಳಲ್ಲಿ ಒಂದು ಸಾವಿರ, ಐದು ಸಾವಿರ ಹೀಗೆ ಕೈಗೆ ಸಿಕ್ಕಷ್ಟು ಹಣವನ್ನು ದೋಚಿಕೊಂಡು ಖದೀಮರು ಪರಾರಿಯಾಗಿದ್ದಾರೆ. ಇನ್ನು ನಾಲ್ಕು ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿ ಏನೂ ಸಿಗದೆ ಖದೀಮರು ಬರಿ ಗೈಯಲ್ಲಿ ಹಿಂತಿರುಗಿದ್ದಾರೆ.

ಅಂಗಡಿಗಳ ಬೀಗ ಮುರಿದು ಬೆಳಗಿನ ಜಾವ ಕೈಚಳಕ ತೋರಿಸಿ ಖದೀಮರು ಪರಾರಿ ಆಗಿದ್ದು, ಒಂದು ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ. ಸ್ಥಳಕ್ಕೆ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

___

Share this News
error: Content is protected !!