July 25, 2021

NEWS IMPACT| ಅಲೆಮಾರಿ ಜನಾಂಗದ ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಶಾಸಕ ನೆಹರು ಓಲೇಕಾರ‌; ಅಲೆಮಾರಿ ಜನಾಂಗದ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸುವ ಭರವಸೆ.!

ಹಾವೇರಿ- ಹಾವೇರಿ ನಗರದ ಹೊರವಲಯದಲ್ಲಿರುವ ಅಲೆಮಾರಿ ಜನಾಂಗದ ನಿವಾಸಿಗಳ ಮಕ್ಕಳು ಈಗ ಶಾಲೆಯೂ ಇಲ್ಲದೇ, ಮೊಬೈಲ್ ಪೋನ್ ಕೂಡ ಇಲ್ಲದೇ ಆನ್ ಲೈನ್ ಶಿಕ್ಷಣ ಪಡೆಯಲು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಎನ್ನುವ ಸುದ್ದಿಯನ್ನು ಸುದ್ದಿತರಂಗ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಹಾವೇರಿ ಶಾಸಕರು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಆನ್ ಲೈನ್ ಶಿಕ್ಷಣಕ್ಕಾಗಿ ಮಕ್ಕಳ ಪರದಾಟ ಅನ್ನುವ ಸುದ್ದಿಗೆ ಹಾಗೂ ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಹಾವೇರಿ ಶಾಸಕ ನೆಹರು ಓಲೇಕಾರ ಸಮಸ್ಯೆ ಆಲಿಸಿದ್ದಾರೆ. ಅಲ್ಲದೇ ಭವಾನಿ ಭರ್ಗಿ ಮತ್ತು ದುರ್ಗಮ್ಮ ಭರ್ಗಿ ಎಂಬ ಅಲೆಮಾರಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ನೀಡಿದ್ದಾರೆ.

ಮನೆಯಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯುತ್ ಇಲ್ಲ.
ನಾವು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಎಲ್ಲ ಚೊಲೋ ಅಂಕ ತಗೊಂಡವ್ರಿ, ಈಗ ಆನ್ ಲೈನ್ ಕ್ಲಾಸ್ ಪ್ರಾರಂಭವಾಗುತ್ತಿವೆ. ನಮಗೆ ಮೊಬೈಲ್ ಇಲ್ಲ ಎಂದು ಉತ್ತಮ ಅಂಕ ಪಡೆದು ಮೂರಾರ್ಜಿ ದೇಶಾಯಿ ಶಾಲೆಗೆ ಆಯ್ಕೆಯಾಗಿರುವ ಪ್ರತಿಭಾವಂತ ವಿಧ್ಯಾರ್ಥಿನಿ ಭವಾನಿ ಭರ್ಗಿ ಮತ್ತು ದುರ್ಗಮ್ಮ ಭರ್ಗಿ ಎಂಬ ಅಲೆಮಾರಿ ಮಕ್ಕಳು ತಮ್ಮ ನೋವುನ್ನು ಹೇಳಿಕೊಂಡಿದ್ದರು. ಹಾವೇರಿ ಶಾಸಕರಾದ ನೆಹರು ಓಲೇಕಾರ ರವರು ಸ್ಥಳಕ್ಕೆ ಭೇಟಿ ಎರಡು ಮಕ್ಕಳಿಗೆ ಮೊಬೈಲ್ ನೀಡಿ ಚೆನ್ನಾಗಿ ಓದಿ ಎಂದು ಹಾರೈಸಿದರು. ಅಲ್ಲದೆ ಅಲೆಮಾರಿ ಜನಾಂಗದ ಮಕ್ಕಳು ವಸತಿ ನಿಲಯಗದಲ್ಲಿ ಇರುವ ಲಿಸ್ಟ್ ಮಾಡಿಕೊಡಿ ನಾನು ವ್ಯವಸ್ಥೆ ಮಾಡುತ್ತೇನೆ. ಉಚಿತವಾಗಿ ಹಾಸ್ಟೆಲ್ ಹಾಗೂ ಮೊರಾರ್ಜಿ ಸ್ಕೂಲ್ ಗೆ ಸೇರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಿರೇಶ ತುಪ್ಪದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ಮಾಟ್ ಪೋನ್ ಇಲ್ಲ. ಆನ್ ಲೈನ್ ಕ್ಲಾಸ್ ಗೆ ನಾವು ಕುಳಿತುಕೊಳ್ಳಲು ಆಗುವುದಿಲ್ಲ ಅನ್ನುವ ಮಕ್ಕಳಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡಿದ ಹೃದಯವಂತ ಶಾಸಕ ನೆಹರು ಓಲೇಕಾರ ರವರಿಗೆ ಮಕ್ಕಳು ಮತ್ತು ಜನತೆಯ ಪರವಾಗಿ ನಮ್ಮದೊಂದು ಸಲಾಂ.

_________

Share this News
error: Content is protected !!