July 25, 2021

ಪೊಲೀಸರನ್ನು ಕಂಡು ದಿಕ್ಕೆಟ್ಟು ಓಡಿದ ಜನರು; 26 ಮಂದಿ ಮೇಲೆ ಎಫ್.ಐ.ಆರ್ ದಾಖಲು.!

ಹೀರೆಕೆರೂರು – ಕೊರೋನಾ ಎರಡನೇಯ ಅಲೆಯ ಅಬ್ಬರ ಈಗಷ್ಟೇ ಕಡಿಮೆಯಾಗಿದೆ. ಸರ್ಕಾರ ಅನ್ ಲಾಕ್ ಮಾಡುತ್ತಿದ್ದಂತೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಎಂ.ಕೆ.ಯತ್ತಿನಹಳ್ಳಿ ಗ್ರಾಮದಲ್ಲಿ ಕಾರಹುಣ್ಣಿಮೆಯ ಪ್ರಯುಕ್ತ ಕೊಬ್ಬರಿ ಹೋರಿ ಓಡಿಸುವ ಸ್ವರ್ದೆಯಲ್ಲಿ ಸಾವಿರಾರು ಜನರು ಭಾಗವಹಸಿದ್ದಾರೆ.

ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ

ಗ್ರಾಮದ ಮಧ್ಯಭಾಗ ಹೊಸಕೆರೆ ಓಣಿಯಲ್ಲಿ ಕೊಬ್ಬರಿ ಹೋರಿ ಓಡಿಸುವ ಸ್ಪರ್ದೆಯ ಆಯೋಜನೆ ಮಾಡಿದ್ದರು. ರಸ್ತೆಯ ಎರಡು ಬದಿಯಲ್ಲಿ ಟ್ರ್ಯಾಕ್ಟರ್ , ಎತ್ತಿನಬಂಡಿಗಳನ್ನು ನಿಲ್ಲಿಸಿ ಹೋರಿಗಳನ್ನ ಓಡಿಸುತ್ತಿದ್ದರು.

 

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಂಸಭಾವಿ ಪೊಲೀಸರು ಗುಂಪು ಚದುರಿಸಿದ್ದಾರೆ. ಹಬ್ಬ ಮಾಡಲು ಸೇರಿದ್ದ ಸಾವಿರಾರು ಜನರು ಈ ವೇಳೆ ದಿಕ್ಕುಪಾಲಾಗಿ ಓಡಿದ್ದಾರೆ. ಅಲ್ಲದೆ ಹೋರಿ ಹಬ್ಬ ಆಯೋಜನೆ‌ ಮಾಡಿದ 26 ಜನ ಗ್ರಾಮದ ಮುಖಂಡರ ಮೇಲೆ ಪೊಲೀಸರು ಕೊರೋನಾ ನಿಯಮಾವಳಿ ಉಲ್ಲಂಘನೆ ಪ್ರಕರಣ ದಾಖಲು ಮಾಡಿದ್ದಾರೆ.

ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

_____

Share this News
error: Content is protected !!