July 25, 2021

ASSAULT| ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ವಿರೋಧ; ತಹಶೀಲ್ದಾರ ಎದುರಿನಲ್ಲೇ ಪೊಲೀಸರಿಂದ ರೈತನ ಮೇಲೆ ಹಲ್ಲೆ.!

ಹಾವೇರಿ – ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ವಿರೋಧಿಸಿದ ರೈತನ ಮೇಲೆ ತಹಶೀಲ್ದಾರ ಎದುರಿನಲ್ಲಿಯೇ ಹಲ್ಲೆ ‌ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ಜಮೀನಿನಲ್ಲಿ ಎರಡು ದಿನದ ಹಿಂದೆ ಘಟನೆ ನಡೆದಿರುವುದು. ಹಲ್ಲೆಗೊಳಗಾದ ರೈತನನ್ನು ಪರಮೇಶ್ವರ ಕಂಬಳಿ ಎಂದು ಗುರುತಿಸಲಾಗಿದೆ.

ಪೊಲೀಸರೊಂದಿಗೆ ಏಕವಚನದಲ್ಲಿ ಮಾತನಾಡುತ್ತಿಯಾ ಎಂದು ರಾಣೆಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸ್ ಕಾನಸ್ಟೇಬಲ್ ಹರೀಶ ಹಾಲಬಾವಿ ಮತ್ತು ಮೋಹನ ಮೇಲಗೇರಿ ಎಂಬುವರು ರೈತನ ಮೇಲೆ ಹಲ್ಲೆ ಮಾಡಿದ್ದಾರೆ.‌

ವಿವಿಧ ಹುದ್ದೆಗಳಿಗೆ ಸರಕಾರ ಹೊರಡಿಸಿರುವ ನೇಮಕಾತಿ ಆದೇಶ ನೋಡಲು ಇಲ್ಲಿ click ಮಾಡಿ

ರೈತ ಪರಮೇಶ್ವರ ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಾಗ ರೈತನನ್ನು ಠಾಣೆಗೆ ಹಾಕೊಂಡು ಹೋಗೋಣ್ವಾ ಎಂದು ಪೊಲೀಸರು ಅನ್ನುತ್ತಿದ್ದಂತೆ, ಹಾಕ್ಕೊಂಡು ಹೋಗು ಬಾ ಅಂತಾ ರೈತ ಎದರುತ್ತರ ಕೊಟ್ಟಿದ್ದಾನೆ. ಇದರಿಂದ ಕೋಪಗೊಂಡ ಪೊಲೀಸರು ರೈತನಿಗೆ ಥಳಿಸಿದ್ದಾರೆ. ಕಲ್ಲು ಕ್ವಾರಿ ಹಾಗೂ ಅದರ ಅಕ್ಕಪಕ್ಕದ ಕೆಲವು ರೈತರ ಜಮೀನಿಗೆ ಹೋಗಲು ರಸ್ತೆ ನಿರ್ಮಾಣಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಸಹೋದರ ಡಾಕೇಶ ಲಮಾಣಿ ಹಾಗೂ ಕೆಲವು ರೈತರು ಮುಂದಾಗಿದ್ದರು.

ತಹಶೀಲ್ದಾರ ಶಂಕರ.ಜಿ.ಎಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ತಹಶಿಲ್ದಾರರ ಮುಂದೆಯೇ ರೈತನ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆದ ವಿಡಿಯೋ ವೈರಲ್ ಆಗಿದೆ. ಹಲ್ಲೆ ಮಾಡಿದ ಪೊಲೀಸ್ ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

_______

Share this News
error: Content is protected !!