July 25, 2021

COVID19| ಜಾನುವಾರು ಮಾರುಕಟ್ಟೆ ಬಂದ್; ರಸ್ತೆಯಲ್ಲಿಯೇ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು.!

ಹಾವೇರಿ- ರಾಜ್ಯದಲ್ಲಿ ಕೊರೋನಾ ಎರಡನೆ ಅಲೆಯ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಸರ್ಕಾರ ಅನ್ ಲಾಕ್ ಘೋಷಣೆ ಮಾಡಿದೆ. ಇನ್ನು ಅನ್ ಲಾಕ್ ಘೋಷಣೆ ಮಾಡಿ ಹನ್ನೇರಡು ದಿನಗಳು ಆಗಿಲ್ಲ ಜನರು ಮಾಸ್ಕ್ ಧರಿಸದೇ ಓಡಾಡುವ ಸಂಖ್ಯೆ ಹೆಚ್ಚಾಗಿದೆ.

ಇವತ್ತು ಹಾವೇರಿಯ ಶಿವಲಿಂಗೇಶ್ವರ ಮಾರುಕಟ್ಟೆಯ ಮುಂದೆ ಎತ್ತು, ಎಮ್ಮೆ ಹಾಗೂ ಹಸುಗಳ ಮಾರಾಟ ಜೋರಾಗಿತ್ತು. ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಮಾರುಕಟ್ಟೆಯನ್ನು, ಎಪಿಎಂಸಿ ಸಿಬ್ಬಂದಿ ಮಾರುಕಟ್ಟೆಯನ್ನು ಇನ್ನು ಓಪನ್ ಮಾಡಿಲ್ಲ. ಹೀಗಾಗಿ ಎತ್ತು, ಎಮ್ಮೆ ಹಾಗೂ ಹಸು ಮಾರಾಟಕ್ಕೆ ಬಂದ ಜನರು ಮಾರುಕಟ್ಟೆಯ ಮುಂದೆ ರಸ್ತೆಯಲ್ಲಿ ನಿಲ್ಲಿಸಿ ವ್ಯಾಪಾರ ವಹಿವಾಟು ನಡೆಸಿದ್ದರು.

ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಕೆಲವು ಕೆಲವು ಜನರು ಮಾತ್ರ ಮಾಸ್ಕ್ ಧರಿಸಿದ್ದು ಬಿಟ್ಟರೆ, ಜನರು ಈಗಾಗಲೇ ಮೈಮರೆತು ಓಡಾಡುವರ ಸಂಖ್ಯೆ ಹೆಚ್ಚಾಗಿದೆ. ವ್ಯಾಪಾರಸ್ಥರನ್ನು ಹಾಗೂ ರೈತರನ್ನು ನಿಯಂತ್ರಣ ಮಾಡಲು ಪೊಲೀಸ್ ಸಿಬ್ಬಂದಿಯೂ ಸಹ ಸ್ಥಳದಲ್ಲಿ ಇರಲಿಲ್ಲ.

______

Share this News
error: Content is protected !!