July 25, 2021

ACCIDENT| ಬೈಕಿಗೆ ಮರಳು ಲಾರಿ ಡಿಕ್ಕಿ; ಸವಾರನಿಗೆ ಗಂಬೀರ ಗಾಯ; ಲಾರಿ ಚಾಲಕ ಎಸ್ಕೇಪ್.!

ಹಾವೇರಿ: ಮರಳು ಸಾಗಿಸುವ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಸಮೀಪದ ಗಾಂಧಿಪುರದ ಗ್ರಾಮದ ಬಳಿ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತ ನಡೆದ ತಕ್ಷಣ ಲಾರಿ ಚಾಲಕ ಹಾಗೂ ಕ್ಲಿನರ್ ಮತ್ತು ಲಾರಿಯಲ್ಲಿದ್ದ ಮರಳು ಲೋಡ್ ಅನ್‌ಲೋಡ್ ಮಾಡುವ ಕಾರ್ಮಿಕರು ಓಡಿಹೋಗಿದ್ದಾರೆ. ಗಾಯಾಳು ಬೈಕ ಸವಾರನನ್ನ ಸ್ಥಳೀಯರು ಜಿಲ್ಲಾಸ್ಪತ್ರೆ ದಾಖಲಾಗಿದ್ದಾರೆ.

ಮರಳು ಖಾಲಿ ಮಾಡಿಕೊಂಡು ಹಾವೇರಿ ಕಡೆಯಿಂದ ಗುತ್ತಲದ ಕಡೆಗೆ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಾಂಧಿಪುರದ ಗ್ರಾಮದ ಬಳಿ ಇರೋ ಹಂಪಗಳು ಇವೆ. ಗುತ್ತಲ ಮಾರ್ಗದಿಂದ ಹಾವೇರಿ ಕಡೆಗೆ ಬರುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಅಪಘಾತದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದ್ದು, ವಿದ್ಯತ್ ಕಂಬ ಮುರಿದು ಬಿದ್ದಿದೆ.

ಬೈಕ್ ಸವಾರನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇತನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನೆ ಮಾಡಲಾಗಿದೆ. ಹಾವೇರಿ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ

Share this News
error: Content is protected !!