July 25, 2021

ಸೋನಿಯಾ, ರಾಹುಲ್ ಗಾಂಧಿ ನಮ್ಮ ನಾಯಕರು; ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ನಾವೆಲ್ಲರೂ ಕಾರ್ಯಕರ್ತರು- ಸಲೀಂ ಅಹ್ಮದ್.!

ಹಾವೇರಿ- ಪ್ರಪಂಚದಲ್ಲಿ ಸುಳ್ಳು ಹೇಳೋದರಲ್ಲಿ ಆಸ್ಕರ್ ಅವಾರ್ಡ್ ಕೊಡೋದಾದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಡಬೇಕು. ಕಪ್ಪು ಹಣ ತರ್ತೀವಿ ಅಂದರು ತರಲಿಲ್ಲ. ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಾಕ್ತೀನಿ ಅಂದರು ಹಾಕಲಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಯುವಕರ ಶಾಪ ತಟ್ಟುತ್ತದೆ ಎಂದು ಪ್ರಧಾನಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ ವಾಗ್ದಾಳಿ ಮಾಡಿದ್ದಾರೆ‌.

ಹಾವೇರಿಯಲ್ಲಿ ಮಾತನಾಡಿದ ಅವರು ಯುವಕರು ಕೆಲಸವಿಲ್ಲದೆ ಬೀದಿಯಲ್ಲಿ ಅಲೆಯುವ ಪರಿಸ್ಥಿತಿ ಬಂದಿದೆ. ಚಾಮರಾಜನಗರ ನಗರದಲ್ಲಿ ಆಕ್ಸಿಜನ್ ಕೊಡದೆ ಸರಕಾರವೇ ಮೂವತ್ತಾರು ಜನರನ್ನು ಕೊಲೆ ಮಾಡಿದೆ ಎಂದರು. ಕಾಂಗ್ರೇಸ್ ನಲ್ಲಿ ಸಿಎಂ ಅಭ್ಯರ್ಥಿ ಚರ್ಚೆ ವಿಚಾರಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ. ನಮ್ಮ ಹೋರಾಟ ಕೋಮುವಾದಿ ಪಕ್ಷದ ವಿರುದ್ಧ. ಕೆಲವರು ಕೆಲವರ ಭಾವನೆ, ವಿಚಾರಗಳನ್ನು ಹೇಳಿರಬಹುದು. ಅದು ಈಗ ಅಪ್ರಸ್ತುತ.

ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡ್ತೀವಿ. ನಮ್ಮ ನಾಯಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಾವೆಲ್ಲರೂ ಕಾರ್ಯಕರ್ತರು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ‌. ರಾಜ್ಯದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಮಾಡುತ್ತೇವೆ.

ಇನ್ನು ಪಕ್ಷ ಬಿಟ್ಟು ಹೋದವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕತ್ವ ಒಪ್ಪಿ ಬರುವವರ ಬಗ್ಗೆ ಚರ್ಚೆ ನಡೆಯುತ್ತದೆ. ಅರ್ಜಿ ಕೊಟ್ಟ ನಂತರ ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿ ನೇತೃತ್ವದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Share this News
error: Content is protected !!