July 25, 2021

ಯೋಗೀಶ್ ಕೊಲೆ ಕೇಸ್: ಬ್ಯಾಡಗಿ ಎಪಿಎಂಸಿ ಕಾರ್ಯದರ್ಶಿ ಸೋಮು ನ್ಯಾಮಗೌಡ ಸಿಬಿಐ ವಶಕ್ಕೆ.!

ಧಾರವಾಡ- ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಕೆ.ಪಿ.ಎಸ್ ಅಧಿಕಾರಿ ಸೋಮು ನ್ಯಾಮಗೌಡರ ಅವರನ್ನು ಗದಗನಲ್ಲಿ ಬಂಧಿಸಿ ಧಾರವಾಡಕ್ಕೆ ಅವರನ್ನು ಕರೆತಂದು ತೀವ್ರ ವಿಚಾರಣೆ ನಡೆಸಿದ್ದಾರೆ.

ಸದ್ಯ ಬ್ಯಾಡಗಿ ಎಪಿಎಮ್‌ಸಿ, ಗದಗ ಕಾರ್ಯದರ್ಶಿಯಾಗಿರುದ ನ್ಯಾಮಗೌಡರ ಅವರನ್ನು ರಾಕೇಶ ರಂಜನ್ ನೇತೃತ್ವದ ಸಿಬಿಐ ತಂಡ ಗದಗನಲ್ಲಿ ಬಂಧಿಸಿ ಧಾರವಾಡದ ಠಾಣೆಗೆ ಕರೆತಂದು ವಿಚಾರಣೆ ಮಾಡಿದರು.

ಕೊಲೆ ಪ್ರಕರಣದಲ್ಲಿ ಸದ್ಯ ಬಂಧನದಲ್ಲಿರುವ ವಿನಯ್ ಕುಲಕರ್ಣಿ ಅವರು, ಈ ಹಿಂದೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಖಾತೆಯ ಸಚಿವರಾಗಿದ್ದ ಸಂದರ್ಭದಲ್ಲಿ
ನ್ಯಾಮಗೌಡ ಅವರು ವಿನಯ್, ಅವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಹಿಂದೆಯೂ ಸಹ ಸಿಬಿಐ ಅಧಿಕಾರಿಗಳು ಸೋಮುನ್ಯಾಮಗೌಡ ಅವರನ್ನು ಹಲವಾರು ಬಾರಿ ಉಪನಗರಠಾಣೆಗೆ ಕರೆಯಿಸಿಕೊಂಡು ವಿಚಾರಣೆಗೊಳಪಡಿಸಿದ್ದರು.

ಮಾಜಿ ಸಚಿವ ವಿನಯ ಕುಲಕರ್ಣಿ ವಿಚಾರಣೆ ನಡೆದು ಆದೇಶ ಇಂದು ಹೊರಬೀಳಲಿದೆ ಎನ್ನಲಾಗಿದ್ದು, ಈ ಬೆನ್ನಲ್ಲೆ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

Share this News
error: Content is protected !!