July 25, 2021

SNAKE RESCUE| ಟಾರ್ ಮೆತ್ತಿಕೊಂಡು ಒದ್ದಾಡುತ್ತಿದ್ದ ನಾಗರಹಾವು; ಜೀವದ ಹಂಗು ತೊರೆದು ಉರಗವನ್ನು ರಕ್ಷಿಸಿದ ಯುವಕರು!

ಹಾವೇರಿ- ಡಾಂಬರಿನಲ್ಲಿ ಸಿಲುಕಿಕೊಂಡು ಹೈರಾಣಾಗಿ ಸಾವು ಬದುಕಿನ‌ ಮದ್ಯೆ ಹೋರಾಟ ನಡೆಸುತ್ತಿದ್ದ ನಾಗರಹಾವನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ. ಹಾವೇರಿ ನಗರದ ಹುಕ್ಕೇರಿ ಮಠದ ಬಳಿ ಘಟನೆ ನಡೆದಿದೆ.

ಹುಕ್ಕೇರಿಮಠದ ಹತ್ತಿರ ರಸ್ತೆಯಲ್ಲಿ, ರಸ್ತೆಗೆ ಹಾಕುವ ಡಾಂಬರಿನಲ್ಲಿ ಸಿಕ್ಕು ನಾಗರಹಾವೊಂದು ಒದ್ದಾಡುತ್ತಿತ್ತು. ದಾರಿಯಲ್ಲಿ ಹೋಗುವಾಗ ಇದನ್ನು ಗಮನಿಸಿದ ಜಗದೀಶ ಮತ್ತು ಆತನ ಸ್ನೇಹಿತರು ಸೇರಿ ಡಾಂಬರಿನಿಂದ ಉರಗವನ್ನು ಹೊರತೆಗೆದು, ಹಾವಿಗೆ ಮೆತ್ತಿಕೊಂಡಿದ್ದ ಡಾಂಬರ್ ನ್ನು ಸಂಪೂರ್ಣವಾಗಿ ಕ್ಲೀನ್ ಮಾಡಿದ್ದಾರೆ.

ರಸ್ತೆಗೆ ಬಳಸುವ ಡಾಂಬರ ತುಂಬಿದ್ದ ಡಬ್ಬಿಯಿಂದ ಸೊರುತ್ತಿದ್ದ ಡಾಂಬರಿನಲ್ಲಿ ಆಕಸ್ಮಿಕವಾಗಿ ಸಿಕ್ಕು ನಾಗರಹಾವು ಒದ್ದಾಡಿದೆ. ಸನಿಹದಲ್ಲಿ ಹಾದು ಹೋಗುವಾಗ ಜಗದೀಶ ಮತ್ತು ಸ್ನೇಹಿತರು ನೋಡಿದ್ದಾರೆ. ತಕ್ಷಣ ಹಾವುನ್ನು ಎತ್ತಿಕೊಂಡು ಬಂದು ನೀರಿನಿಂದ ತೊಳೆದು ಆರೈಕೆ ಮಾಡಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ‌.

ಡಾಂಬರ್ ನಲ್ಲಿ ಸಿಕ್ಕು ಒದ್ದಾಡುತ್ತಿದ್ದ ಉರಗವನ್ನು ರಕ್ಷಿಸಿ ಆರೈಕೆ ಮಾಡಿ ಜೀವ ಉಳಿಸಿದ ಜಗದೀಶ್ ಹಾಗೂ ಆತನ ಸ್ನೇಹಿತರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

_____

Share this News
error: Content is protected !!