July 25, 2021

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನ; 1,76,112 ರೂಪಾಯಿ ಮೌಲ್ಯದ ಮದ್ಯ ವಶ; ಆರೋಪಿ ಬಂಧನ.!

ಹಾವೇರಿ – ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನ ಹಾಗೂ 69 ಲೀಟರ್ ಮದ್ಯ ವಶಪಡಿಸಿಕೊಂಡು ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನಲ್ಲಿ ಬೈಲವಾಳ ಗ್ರಾಮದಲ್ಲಿ ಬಳಿ ನಡೆದಿದೆ.

ಅಕ್ರಮವಾಗಿ ಗೋವಾದಿಂದ ತಂದಿದ್ದ 69 ಲೀಟರ್ ನಷ್ಟು ಮದ್ಯವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮದ್ಯ ಸಾಗಿಸುತ್ತಿದ್ದ ಹಾನಗಲ್ ತಾಲ್ಲೂಕು ನೆಲ್ಲಿಕೊಪ್ಪ ಗ್ರಾಮದ ದೇವರಾಜ್ ಪೂಜರ್ ಎಂಬ ವ್ಯಕ್ತಿಯನ್ನ ಅಬಕಾರಿ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ. ಒಟ್ಟು 1,76,112 ರುಪಾಯಿ ಮೌಲ್ಯದ ಮದ್ಯದ ಮದ್ಯವನ್ನ ವಶಕ್ಕೆ ಪಡೆದುಕೊಂಡು ಆರೋಪಿ ದೇವರಾಜ್ ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಅಬಕಾರಿ ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಸಮೀತಾ ಆರ್.ಟಿ. ಅಬಕಾರಿ ಇಲಾಖೆಯ ಉಪನಿರೀಕ್ಷರಾದ ಸತೀಶ ವಡೆಯರ್. ಅಬಕಾರಿ ಇಖಾಖೆಯ ಪೊಲೀಸ್ ಪೇದೆಗಳಾದ ಪ್ರದೀಪ, ವಿನಯ,ಮಂಜು,ಕಲ್ಲಪ್ಪ, ಹರೀಶ ಸೇರಿದಂತೆ ಸಿಬ್ಬಂದಿಗಳು ನೇತ್ರತ್ವದಲ್ಲಿ ದಾಳಿ ನಡೆಸಿದ್ದಾರೆ.

Share this News
error: Content is protected !!