July 25, 2021

RAVI D CHANNANNAVAR| ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ದೇವರ ದರ್ಶನ ಪಡೆದ ರವಿ ಡಿ.ಚನ್ನಣ್ಣನವರ.!

ವಿಜಯನಗರ – ಯುವಕರ ಕಣ್ಮಣಿ ಹಾಗೂ ದಕ್ಷ ಪೊಲೀಸ್ ಅಧಿಕಾರಿ ಎಸ್.ಪಿ ಸಿಐಡಿ ರವಿ ಡಿ.ಚನ್ನಣ್ಣನವರ ಹಾಗೂ ಆದಾಯ ತೆರೆಗೆ ಅಧಿಕಾರಿ ಅಶೋಕ ಮಿರ್ಜಿ ಇವರು ಭಾನುವಾರ ಸಂಜೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಮೈಲಾರಕ್ಕೆ ಭೇಟಿ ನೀಡಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದರು.

ಈ ವೇಳೆ ಧರ್ಮಾಧಿಕಾರಿ ಶ್ರೀಗುರು ವೆಂಕಪ್ಪಯ್ಯ ಒಡೆಯರ್‌ ಇವರನ್ನು ಸ್ವಾಗತಿಸಿ ಕ್ಷೇತ್ರದ ಮಹಿಮೆಯನ್ನು ತಿಳಿಸಿದರಲ್ಲದೆ ದಕ್ಷ ಅಧಿಕಾರಿ ತಾವಾಗಿದ್ದು, ಹುದ್ದೆಯಲ್ಲಿ ಮತ್ತಷ್ಟು ಪದೋನ್ನತಿ ಹೊಂದಿ ರಾಜ್ಯದ ಜನತೆಗೆ ಹೆಚ್ಚಿನ ಸೇವೆ ನೀಡುವಂತಾಗಲಿ ಎಂದು ಆಶೀರ್ವದಿಸಿದರಲ್ಲದೆ, ನೂತನ ನಮ್ಮ ವಿಜಯನಗರ ಜಿಲ್ಲೆಗೆ ಬಂದು ನಮಗೂ ನಿಮ್ಮ ಸೇವಾ ಭಾಗ್ಯ ಸಿಗುವಂತಾಲಿ ಎಂದರು. ಪ್ರಧಾನ ಅರ್ಚಕ ವೆ.ಬ್ರ ಪ್ರಮೋದ ಭಟ್ ಇವರು ಅರ್ಚನೆಮಾಡಿ ಮಂಗಳಾರತಿ ನೀಡಿದರು. ದೇವಸ್ಥಾನದ ಇಒ ಹೆಚ್‌.ಗಂಗಾಧರ ಕಾರ್ಣಿಕದ ಗೊರವಯ್ಯ.. ರಾಮಣ್ಣ ಹಾಗೂ ಬಾಬುದಾರರು ಹಾಜರಿದ್ದರು.

ಇದಕ್ಕೂ ಮೊದಲು ಕ್ಷೇತ್ರದ ಕನಕ ಗುರುಪೀಠಕ್ಕೆ ಭೇಟಿ ನೀಡಿ ಶ್ರೀನಿರಂಜನಾನಂದಪುರಿ ಶ್ರೀಗಳ ಆಶೀರ್ವಾದ ಪಡೆದರು. ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಹಾಗೆಯೇ ಯುವ ಅಭಿಮಾನಿಗಳು ಅವರ ಜೊತೆ ನಿಂತು ಪೋಟೋ ತೆಗೆಸಿಕೊಂಡರು.

Share this News
error: Content is protected !!