July 25, 2021

ಮನೆ ಮಗನಂತಿದ್ದ ಸನ್ನಿ ಸಾವು; ಕಣ್ಣೀರಿಟ್ಟ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕುಟುಂಬ.!

ಬೆಂಗಳೂರು. – ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಮನೆಯ ಸದಸ್ಯನಂತಿದ್ದ ‘ಸನ್ನಿ’ ಸಾವನಪ್ಪಿದ್ದಾನೆ. ಪ್ರೀತಿಯ ಶ್ವಾನ ಸನ್ನಿ ಸಾವಿನಿಂದ ಗೃಹ ಸಚಿವರು ಹಾಗೂ ಅವರ ಕುಟುಂಬ ಕಣ್ಣೀರಿಟ್ಟಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಬೆಂಗಳೂರಿನ ಮನೆಯಲ್ಲಿ ಕಳೆದ ೧೨ ವರ್ಷದಿಂದ ಮನೆಯ ಸದಸ್ಯನಂತೆ ಪ್ರೀತಿಯಿಂದ ಸನ್ನಿಯನ್ನು ಬೆಳೆಸಲಾಗಿತ್ತು. ಮನೆಯ ಮಗನಂತೆ ಇದ್ದ ಶ್ವಾನ ಸನ್ನಿ ವಯೋಸಹಜ ಕಾಯಿಲೆಯಿಂದ ನಿನ್ನೆ ಸಾವನಪ್ಪಿದೆ.

ಪ್ರೀತಿಯಿಂದ ಸಾಕಿದ ಶ್ವಾನ ವಯೋಸಹಜ ಕಾಯಿಲೆಯಿಂದ ಮೃತಪಟ್ಟ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಅವರ ಇಡೀ ಕುಟುಂಬ ಕಣ್ಣೀರಿಟ್ಟಿದೆ. ಮನೆಯ ಸದಸ್ಯನನ್ನು ಕಳೆದಕೊಂಡಷ್ಟು ದುಃಖವಾಗಿದೆ ಎಂದು ಗೃಹ ಸಚಿವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ನೋವನ್ನು ಹಂಚಿಕೊಂಡಿದ್ದಾರೆ.

Share this News
error: Content is protected !!