July 25, 2021

WhatsApp Tricks| ನೀವು ಆನಲೈನ್ ನಲ್ಲಿ ಇದ್ದರೂ ಕೂಡ ಆಫ್ ಲೈನ್ ಅಂತಾ ತೋರಿಸುತ್ತದೆ. ಹೇಗೆ ಗೊತ್ತಾ.? ಇಲ್ಲಿದೆ ನೋಡಿ ವಾಟ್ಸಪ್ ಟ್ರಿಕ್.!

ಬೆಂಗಳೂರು- ಫೇಸ್​ಬುಕ್ (Facebook) ಒಡೆತನದ ವಾಟ್ಸ್​ಪ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ವಾಟ್ಸಪ್ ನ್ನು ಉಪಯೋಗ ಮಾಡುತ್ತಿದ್ದಾರೆ. ವಾಟ್ಸ್​ಆ್ಯಪ್​ನಲ್ಲಿರುವ (WhatsApp) ಅದೆಷ್ಟೋ ಟ್ರಿಕ್ ಗಳು ಇನ್ನು ಅನೇಕ ಮಂದಿಗೆ ತಿಳಿದಿಲ್ಲ. ಅದು ಅಸಂಖ್ಯಾತ ಟ್ರಿಕ್ ಗಳನ್ನು ಒಳಗೊಂಡಿದೆ. ಡಿಲೀಟ್ ಆದ ಮೆಸೇಜ್ ಗಳನ್ನು ನೋಡುವುದು ಇರಬಹುದು, ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂದು ತಿಳಿಯುವುದು ಇರಬಹುದು. ಹೀಗೆ ಅನೇಕಾನೇಕ ರಹಸ್ಯ ಗಳನ್ನು ವಾಟ್ಸಪ್ ಹೊಂದಿದೆ. ಇದೀಗ ಆ ಸಾಲಿಗೆ ಮತ್ತೊಂದು ರಹಸ್ಯವನ್ನು ನಾವು ನಿಮಗೆ ಹೇಳುತ್ತಿದ್ದೇವೆ.

ಅದೇನೆಂದರೆ ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್​ನಲ್ಲಿ ಇದ್ದರೂ ಆಫ್​ಲೈನ್ ಕಾಣಿಸುವಂತೆ ಮಾಡಬಹುದು. ಹೌದು.. ಇದಕ್ಕೂ ಅನೇಕ ಟ್ರಿಕ್​ಗಳಿವೆ. ಅಸದರೆ ಇದಕ್ಕಾಗಿ ನೀವು ಮತ್ತೊಂದು App ನ ಸಹಾಯ ಪಡೆಯಬೇಕಾಗುತ್ತದೆ. ಆದರೆ ಗಮನವಿರಲಿ, ಯಾವುದೇ ಥರ್ಡ್ ಪಾರ್ಟಿ App ಗಳನ್ನು ಡೌನ್​ಲೋಡ್ ಮಾಡುವ ಮೊದಲು ನೀವು ತುಂಬಾ ಎಚ್ಚರಿಕೆ ವಹಿಸಬೇಕು.

ಈ ಥರ್ಡ್ ಪಾರ್ಟಿ ಆ್ಯಪ್ ಗಳು ಅಷ್ಟೊಂದು ಸುರಕ್ಷಿತವಾಗಿರುವುದಿಲ್ಲ. ಯಾಕೆಂದರೆ ಇವು ನಿಮ್ಮ ಫೋನಿನಲ್ಲಿರುವ ನಿಮ್ಮ ಖಾಸಗಿ ಡೇಟಾವನ್ನು ವಶಕ್ಕೆ ಪಡೆಯಬಹುದು. ಹೀಗಾಗಿ ಯಾವುದೇ ಥರ್ಡ್ ಪಾರ್ಟಿ App ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಮುನ್ನ ನಂಬಿಕೆಗೆ ಅರ್ಹವಾದ App ಗಳನ್ನು ಆಯ್ಕೆ ಮಾಡಿಕೊಳ್ಳಿ.

ವಾಟ್ಸಪ್ ನಲ್ಲಿ ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ಇರುವಂತೆ ಮಾಡಲು GBWhatsApp ಎಂಬ ಥರ್ಡ್ ಪಾರ್ಟಿ App ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು. ಆದರೆ, ಇದು ಆಂಡ್ರಾಯ್ಡ್ ಬಳಕೆದಾರರಿಗೆ Google play ಸ್ಟೋರ್​ನಲ್ಲಿ ಲಭ್ಯವಿಲ್ಲ. ಬದಲಾಗಿ ಕ್ರೋಮ್ ಅಥವಾ ಇತರೆ ವೆಬ್ ಬ್ರೌಸರ್ ಮಾಡುವ ಮೂಲಕ ಡೌನ್​ಲೋಡ್ ಮಾಡಿಕೊಳ್ಳಬೇಕಾಗುತ್ತದೆ.

ಇತ್ತೀಚಿಗೆ ಅಷ್ಟೆ GBWhatsApp ತನ್ನ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು ಅನೇಕರು ಇದನ್ನು ಬಳಸುತ್ತಿದ್ದಾರೆ. ಇದು ನೋಡಲು ಥೇಟ್ ವಾಟ್ಸ್ಆ್ಯಪ್ ಮಾದರಿಯಲ್ಲೇ ಇರುತ್ತದೆ. GBWhatsApp ಅನ್ನು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಡೌನ್​ಲೋಡ್ ಮಾಡಿಕೊಂಡು ನಂತರ ಅದನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು. ಇನ್​ಸ್ಟಾಲ್ ಆದ ನಂತರ ಓಪನ್ ಮಾಡಿ ಮೇಲಗಡೆ ಬಲ ಬದಿಯ ಮೂಲೆಯಲ್ಲಿರುವ ಮೂರು ಡಾಟ್​ಗಳ ಮೇಲೆ ಕ್ಲಿಕ್ ಮಾಡಿ. ಅಲ್ಲಿ Privacy Settings ಎಂಬ ಆಯ್ಕೆ ಇರುತ್ತದೆ.

ಇದರ ಮೇಲೆ ಕ್ಲಿಕ್ ಮಾಡಿದಾಗ ಅನೇಕ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಕೆಳಗಡೆ ಬಂದರೆ Hide Online Status ಎಂದು ಕಾಣಿಸುತ್ತದೆ. ಇದನ್ನು ಆ್ಯಕ್ಟೀವ್ ಮಾಡಿದರೆ ನೀವು ವಾಟ್ಸ್ಆ್ಯಪ್​ನಲ್ಲಿ ಆನ್​ಲೈನ್ ಇದ್ದರೂ ಆಫ್​ಲೈನ್ ಎಂದು ತೋರಿಸುತ್ತದೆ.

Share this News
error: Content is protected !!