July 25, 2021

Crime News| ದೇವಿಯ ತಾಳಿಯನ್ನೇ ಕದ್ದ ಖದೀಮರು; ಚಿನ್ನದ ತಾಳಿ, ಬೆಳ್ಳಿ ಕಿರೀಟ ಸೇರಿದಂತೆ 50 ಸಾವಿರ ರೂ, ಮೌಲ್ಯದ ಆಭರಣ ಕಳ್ಳತನ.!

ಹಾವೇರಿ – ದೇವಸ್ಥಾನದಲ್ಲಿ ಬೀಗ ಮುರಿದು ದೇವರ ಮಾಂಗಲ್ಯ ಸರದಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ಹಾವೇರಿ ತಾಲೂಕಿನ ನೀರಲಗಿ ಗ್ರಾಮದ ಮರಡಿ ದುರುಗಮ್ಮ ದೇವಸ್ಥಾನದಲ್ಲಿ ನಡೆದಿದೆ.

ದೇವಿಗೆ ಹಾಕಿದ್ದ ಚಿನ್ನದ ತಾಳಿ, ಬೆಳ್ಳಿ ಕಿರೀಟ ಸೇರಿದಂತೆ 50 ಸಾವಿರ ರುಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ನಿನ್ನೆ ತಡ ರಾತ್ರಿ ದೇವಸ್ಥಾನಕ್ಕೆ ಖದೀಮರು ಕನ್ನ ಹಾಕಿದ್ದು, ಬೆಳಗ್ಗೆ ಮರಡಿ ದುರುಗಮ್ಮ ದೇವಸ್ಥಾನಕ್ಕೆ ಪೂಜೆಗೆ ಪೂಜಾರಿ ಬಂದಾಗ ಕಳ್ಳತನವಾಗಿದ್ದು ತಿಳಿದು ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗುತ್ತಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

_____

Share this News
error: Content is protected !!