July 25, 2021

ರಾತ್ರೋರಾತ್ರಿ ನಗರಸಭೆಯಿಂದ ಕಾರ್ಮಿಕರ ಕಿಟ್ ನಾಪತ್ತೆ; ಮೊಬೈಲ್ ನಲ್ಲಿ ಸೆರೆಯಾಯ್ತು ಕಾರಿಗೆ ಲೋಡ್ ಮಾಡುತ್ತಿರುವ ದೃಶ್ಯ.!

ಹಾವೇರಿ: ನಗರಸಭೆಯ ಕಾರ್ಯಾಲಯದಲ್ಲಿ ಸಂಗ್ರಹಿಸಿ ಇಡಲಾಗಿದ್ದ ಕಾರ್ಮಿಕ ಇಲಾಖೆಯ ಕಿಟ್‌ಗಳನ್ನು ನಿನ್ನೆ ರಾತ್ರೋರಾತ್ರಿ ಪಾರ್ಸಲ  ಮಾಡಿದ ಬಗ್ಗೆ ಸುದ್ದಿ ವರದಿಯಾಗಿದೆ. ಈ ಬಗ್ಗೆ ಕಿಟ್ ಗಳನ್ನು ಪಾರ್ಸಲ್ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಕಳೆದ ರಾತ್ರಿ ಕಾರೊಂದರ ಡಿಕ್ಕಿಯಲ್ಲಿ ನಗರಸಭೆಯ ಕಾರ್ಯಾಲಯದ ಒಳಗಿನಿಂದ ಕಾರ್ಮಿಕ ಇಲಾಖೆಯ ಲೇಬಲ್ ಹೊಂದಿರುವ ಕಿಟ್‌ಗಳನ್ನು ಕೆಲವರು ಸಾಗಿಸಿತ್ತಿರುವ ವಿಡಿಯೋ ವೈರಲ್ ಆಗಿದೆ.

ಇಬ್ಬರು ವ್ಯಕ್ತಿಗಳು ನಗರಸಭೆಯ ಕಾರ್ಯಾಲಯದ ಒಳಗಿನಿಂದ ಕಿಟ್‌ಗಳನ್ನು ತಗೆದುಕೊಂಡು ಬಂದು ಕಾರಿನ ಡಿಕ್ಕಿಯಲ್ಲಿ ಸಂಗ್ರಹಿಸುತ್ತಿರವ ದೃಶ್ಯಗಳು ವೈರಲ್ ಆಗಿದ್ದು, ಕಾರ್ಮಿಕ ಇಲಾಖೆಯ ಕಾರ್ಮಿಕರಿಗೆಂದು ನೀಡಿರುವ ಕಿಟ್‌ಗಳನ್ನು ಎಲ್ಲಿಗೆ ಸಾಗಿಸಲಾಗಿದೆ.? ಸಾಗಿಸಿದವರು ಯಾರು? ರಾತ್ರಿ ವೇಳೆ ಕಿಟ್ ತಗೆದುಕೊಂಡು ಹೋಗುವ
ಅವಶ್ಯಕತೆ ಯಾದರೂ ಏನು?.

ನಗರಸಭೆಯಲ್ಲಿದ್ದ ಆಹಾರಧಾನ್ಯಗಳ ಕಿಟ್‌ಗಳನ್ನು ರಾತ್ರಿಯ ವೇಳೆಯಲ್ಲಿ ದರೋಡೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಹಾವೇರಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.

Share this News
error: Content is protected !!