July 25, 2021

Mobile Battery Explosion | ಮೊಬೈಲ್ ಬ್ಯಾಟರಿ ಸ್ಫೋಟ;10 ವರ್ಷದ ಬಾಲಕನ ಕೈ ಬೆರಳುಗಳು ಕಟ್.!

ಸವಣೂರು – ಆಟವಾಡುತ್ತಿದ್ದ ವೇಳೆ ಮೊಬೈಲ್‌ನ ಹಳೆಯ ಬ್ಯಾಟರಿ ಸ್ಫೋಟಗೊಂಡು 10 ವರ್ಷದ ಬಾಲಕನ ಕೈಯಲ್ಲಿನ ಮೂರು ಬೆರಳುಗಳು ಕಟ್‌, ಮುಖಕ್ಕೂ ಗಾಯವಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡ ಬಾಲಕನನ್ನ ಕಾರ್ತಿಕ ಕಲಾದಗಿ 10 ವರ್ಷ ವಯಸ್ಸು ಎಂದು ಗುರುತಿಸಲಾಗಿದೆ. ಮನೆಯ ಪಕ್ಕದಲ್ಲಿ ಎಸೆದಿದ್ದ ಮೊಬೈಲ್ ನ ಹಾಳಾದ ಬ್ಯಾಟರಿ ತೆಗೆದುಕೊಂಡು ಆಟವಾಡುತ್ತಿದ್ದ ವೇಳೆ ಈ‌ ದುರ್ಘಟನೆ ಸಂಭವಿಸಿದೆ.

ಹಳೆಯ ಮೊಬೈಲ್ ಬ್ಯಾಟರಿಯಲ್ಲಿ ಲೈಟ್ ಹಚ್ಚಲು ಹೋಗಿ ಬ್ಯಾಟರಿ ಸಾರ್ಟ್ ಆಗಿ ಸ್ಫೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳು ಕಾರ್ತಿಕನನ್ನ ಸವಣೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

______

Share this News
error: Content is protected !!