July 25, 2021

Police Ride| ಇಸ್ಪೀಟು ಅಡ್ಡೆ ಮೇಲೆ‌ ಪೋಲಿಸರ ದಾಳಿ‌; 23 ಜನರ ಬಂಧನ; 1 ಲಕ್ಷ 48 ಸಾವಿರ ರೂ. ನಗದು ಹಣ ವಶ.!

ಹಾವೇರಿ- ಮಟ್ಕಾ ಜೂಜಾಟದ ಅಡ್ಡೆ ಮೇಲೆ ಪೊಲೀಸರ ದಾಳಿ ನಡೆಸಿ‌ 23 ಜನರನ್ನು ಬಂಧಿಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣದ ಕೋಡಿಯಾಲ್ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ.

ಕೋಡಿಯಾಲ್ ಹೊಸಪೇಟೆ ಗ್ರಾಮದ ಬಳಿ ನಡೆಯುತ್ತಿದ್ದ ಓ.ಸಿ ಜೂಜಾಟದ ಬಗ್ಗೆ ಖಚಿತ ಮಾಹಿತಿ‌ ಪಡೆದುಕೊಂಡು ದಾಳಿ ನಡೆಸಿ‌ 23 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಲಕ್ಷ 48 ಸಾವಿರ ರುಪಾಯಿ ನಗದು ಹಣ, ಓಸಿ ಆಟಕ್ಕೆ ಬಳಸುತ್ತಿದ್ದ ಕ್ಯಾಲ್ಕುಲೇಟರ್ ಸೇರಿದಂತೆ ವಿವಿಧ ವಸ್ತುಗಳನ್ನು ಪೋಲಿಸರು ಜಪ್ತಿ ಮಾಡಿದ್ದಾರೆ.

ಕೆ.ಪಿ ಆಕ್ಟ್ ಅಡಿಯಲ್ಲಿ ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹಾವೇರಿ ಎಸ್ಪಿ ಹನುಮಂತರಾಯ ರವರು ಮಾಹಿತಿ ನೀಡಿದ್ದಾರೆ. ಅಲ್ಲದೆ 23 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.‌ ಜೂಜಾಟದ ಅಡ್ಡೆ ಯನ್ನು ಯಾರು ನಡೆಸುತ್ತಿದ್ದರು ಎಂದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

____

Share this News
error: Content is protected !!