July 25, 2021

BS Yadiyurappa| ಯಡಿಯೂರಪ್ಪರವರನ್ನು ಕಳೆದುಕೊಂಡರೆ ಮಾಣಿಕ್ಯವನ್ನು ಕಳೆದುಕೊಂಡಂತೆ. -ಮಾಜಿ ಶಾಸಕ ಸುರೇಶಗೌಡ ಪಾಟೀಲ.

ಹಾವೇರಿ – ಮುಖ್ಯಮಂತ್ರಿ ಯಡಿಯೂರಪ್ಪ ಅಭಿವೃದ್ಧಿ ಹರಿಕಾರ, ನಾನು ಬ್ಯಾಡಗಿಯಲ್ಲಿ ಶಾಸಕನಾಗಿದ್ದ ವೇಳೆ ನಮ್ಮ‌ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಯಡಿಯೂರಪ್ಪನವರೇ ಎರಡು ವರ್ಷಗಳ ಕಾಲ ಮುಂದುವರೆಸಬೇಕು ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ್ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ಮಾತನಾಡಿದ ಅವರು ಯಡಿಯೂರಪ್ಪನವರು ಬಿಜೆಪಿ ಪಕ್ಷಕ್ಕಾಗಿ ಹೋರಾಟ ಮಾಡಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಅಂತಹ ಕೀರ್ತಿ ಅವರಿಗೆ ಸಲ್ಲುತ್ತದೆ. ಯಾವ ಕಾರಣಕ್ಕೆ ಕೇಂದ್ರದವರು ತೆಗೀತಾ ಇದ್ದಾರೊ ಗೊತ್ತಿಲ್ಲ. ಅವರು ಚೆನ್ನಾಗಿ ಆಡಳಿತ ಮಾಡುತ್ತಿದ್ದಾರೆ. ಅಂತವರನ್ನು ಕಳದುಕೊಂಡರೆ ಮಾಣಿಕ್ಯ ಕಳೆದುಕೊಂಡ ಹಾಗೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರೆ ಮುಂದುವರೆಯಬೇಕು. ಅವರೇ ಮುಂದಿನ ಎರಡು ವರ್ಷಗಳ ಕಾಲ ಸಿಎಂ ಆಗಿರಬೇಕು ಅಂತಾ ರೈತರದ್ದು ಜನಗಳದ್ದು ಹಾಗೂ ನಮ್ಮಆಸೆ ಕೂಡ ಇದೆ. ಕರ್ನಾಟಕದ ಜನತೆಯ ಪರವಾಗಿ ನಾನು ಎರಡು ವರ್ಷ ಯಡಿಯೂರಪ್ಪ ಸಿ.ಎಂ ಸ್ಥಾನದಿಂದ ಮುಂದುವರೆಸಬೇಕು ಎಂದು ಹೈಕಮಾಂಡ್ ಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದ್ದಾರೆ.

____

Share this News
error: Content is protected !!